Site icon Vistara News

Yadgiri News: 2047ಕ್ಕೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲಿದೆ: ಕೇಂದ್ರ ಸಚಿವ ನಾರಾಯಣಸ್ವಾಮಿ

Yadgiri News: Union Minister Narayanaswamy inaugurated the Vikasita Bharat Sankalpa Yatra at Yadgiri

ಯಾದಗಿರಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ ಅಭಿವೃದ್ಧಿ ಯೋಜನೆಗಳಿಂದ ದೇಶದ ಸರ್ವರಿಗೂ ಅನುಕೂಲವಾಗುತ್ತಿದ್ದು, 2047 ಕ್ಕೆ ಭಾರತವು ಅಗ್ರಗಣ್ಯ ಅಭಿವೃದ್ಧಿ ಹೊಂದಿದ ದೇಶವಾಗಿಸಲು ಪ್ರಧಾನಿ ಅವರು ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ನಾರಾಯಣಸ್ವಾಮಿ ಹೇಳಿದರು.

ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಲೀಡ್ ಬ್ಯಾಂಕ್ ಅವರ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಹೊಗೆ ಮುಕ್ತ ಅಡುಗೆಮನೆ ಉದ್ದೇಶಕ್ಕಾಗಿ 10 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಎಲ್.ಪಿ.ಜಿ ಸಿಲಿಂಡರ್, ಪ್ರತಿ ತಿಂಗಳು ಜನರಿಗೆ ಉಚಿತ ಪಡಿತರ ಧಾನ್ಯ, 55 ಕೋಟಿ ಜನರಿಗೆ ಪ್ರತಿ ವರ್ಷ 5 ಲಕ್ಷ ತನಕ ಉಚಿತ ಚಿಕಿತ್ಸೆ, 13.5 ಕೋಟಿಗೂ ಅಧಿಕ ಮನೆಗಳ ನಲ್ಲಿಗೆ ನೀರು ಸಂಪರ್ಕ, ದೇಶದ ಪ್ರತಿ ಮನೆಗೂ ಸುಲಭ ಶೌಚಾಲಯ ನಿರ್ಮಾಣ ಸೇರಿದಂತೆ ಹತ್ತಾರು ಪ್ರಧಾನಿ ಮೋದಿ ಅವರ ಅಭಿವೃದ್ಧಿ ಯೋಜನೆಗಳಿಂದ ದೇಶದ ನಾಗರಿಕರಿಗೆ ಅನುಕೂಲವಾಗಿದ್ದು, 2047 ಕ್ಕೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Karnataka weather : ವಿಜಯಪುರದಲ್ಲಿ ಚಳಿ ಚುರುಕು; ಕರಾವಳಿ, ದಕ್ಷಿಣ ಒಳನಾಡಲ್ಲಿ ಶುಷ್ಕ ವಾತಾವರಣ

ದೇಶದ ಎಲ್ಲೆಡೆ ಉತ್ತಮ ಸಂಪರ್ಕಕ್ಕಾಗಿ ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಿದ್ದು, ಪ್ರತಿ ಸಾವಿರ ಜನರಿಗೆ ಒಬ್ಬ ವೈದ್ಯರು ಇರುವುದನ್ನು 800 ಜನರಿಗೆ ಒಬ್ಬ ವೈದ್ಯರು ಇರುವ ಹಾಗೆ 750 ಮೆಡಿಕಲ್ ಕಾಲೇಜು ನಿರ್ಮಿಸಿ, ಆರೋಗ್ಯ ಕ್ಷೇತ್ರದಲ್ಲಿ ಮೈಲಿಗಲ್ಲು ನಿರ್ಮಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಈ ಎಲ್ಲಾ ಯೋಜನೆಯಿಂದ ಎಲ್ಲ ನಾಗರಿಕರಿಗೂ ಸೌಲಭ್ಯಗಳು ಸಿಗುತ್ತಿದ್ದು, ಇವುಗಳಿಂದ ದೇಶದ ಅಭಿವೃದ್ಧಿ ಹೊಂದಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಸೆಂಚುರಿ ಬಾರಿಸಿ ಸೆಂಚುರಿಯನ್​​ನಲ್ಲಿ ದಾಖಲೆ ಬರೆದ ಕನ್ನಡಿಗ ಕೆಎಲ್​ ರಾಹುಲ್​

ಈ ಸಂದರ್ಭದಲ್ಲಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮುಖಂಡರಾದ ಡಾ.ಶರಣಭೂಪಾಲರೆಡ್ಡಿ, ದೇವೇಂದ್ರನಾಥ ಕೆ ನಾದ್, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಎಸ್.ಬಿ.ಐ ಎಡಿಬಿ ಶಾಖೆ ಮುಖ್ಯ ವ್ಯವಸ್ಥಾಪಕರು ಅಶೋಕ್ ಕುಮಾರ್, ಅಗ್ರಿ ಫೀಲ್ಡ್ ಆಫೀಸರ್ ಗುರುಮೂರ್ತಿ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಲೋಹಿಸ್, ನಬಾರ್ಡ್ ಡಿಡಿಎಂ ಲೋಹಿತ್, ಎಲ್.ಬಿ.ಒ ಕುಮಾರಸ್ವಾಮಿ, ಅಮೀರ್ ಪಟೇಲ್, ರಾಯಚೂರು ಕೆನರಾ ಬ್ಯಾಂಕ್ ಎ.ಜಿ.ಎಂ ಮಹಾದೇವಿ, ಎಫ್.ಎಲ್.ಸಿ ಶ್ರೀಧರ್, ಸಂಗಪ್ಪ ವಾಲಿ, ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version