ಯಾದಗಿರಿ: ಕೃಷ್ಣಾ ನದಿಯ ಪ್ರವಾಹದಿಂದ ಕೊಳ್ಳುರು ಸೇತುವೆ ಜಲಾವೃತವಾಗಿದ್ದು, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ, ಪರಿಶೀಲನೆ (Yadgiri News) ಮಾಡಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಸೇತುವೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭೇಟಿ ನೀಡಿ, ಪ್ರವಾಹದಿಂದ ಹಾನಿಯಾದ ಪ್ರದೇಶ ವೀಕ್ಷಣೆ ಮಾಡಿದರು.
ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಪರಿಣತರ ಜತೆ ಎಂ.ಬಿ.ಪಾಟೀಲ್ ಸಮಾಲೋಚನೆ
ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆ ಕೊಳ್ಳುರು ಸೇತುವೆ ಕೃಷ್ಣಾ ನದಿಯ ಪ್ರವಾಹಕ್ಕೆ ಜಲಾವೃತವಾಗಿದೆ. ಸೇತುವೆಯು ರಾಯಚೂರು-ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ, ಈಗ ಸಂಪರ್ಕ ಕಡಿತಗೊಂಡಿದೆ. ಸೇತುವೆ ತೀರಕ್ಕೆ ತೆರಳಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಕೃಷ್ಣಾ ನದಿಯ ಪ್ರವಾಹದ ಪರಿಸ್ಥಿತಿ ಅವಲೋಕನೆ ಮಾಡಿದರು.
ಈ ವೇಳೆ ಶಾಸಕರು, ಕೊಳ್ಳುರು ಗ್ರಾಮದ ಜನರ ಸಮಸ್ಯೆ ಆಲಿಸಿದರು. ಪ್ರತಿ ವರ್ಷ ಕೃಷ್ಣಾ ನದಿಯ ಪ್ರವಾಹ ಬಂದಾಗ ಹಾನಿಯಾಗುವ ಬಗ್ಗೆ ಗ್ರಾಮಸ್ಥರು ನೋವು ತೊಡಿಕೊಂಡರು. ಕೃಷ್ಣಾ ನದಿ ತೀರದ ರೈತರು ಪ್ರತಿ ವರ್ಷ ಬೆಳೆ ಹಾನಿ ಎದುರಿಸುತ್ತಿದ್ದೆ. ಈ ಸೇತುವೆ ಕೆಳಭಾಗದಲ್ಲಿದೆ ಎತ್ತರವಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ಕೃಷ್ಣಾ ನದಿಗೆ ಹೆಚ್ಚು ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕೊಳ್ಳುರು ಸೇತುವೆ ಮುಳುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಸೇತುವೆ ಎತ್ತರವಾಗಿ ನಿರ್ಮಾಣ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.ಕೃಷ್ಣಾ ಪ್ರವಾಹದಿಂದ ಬೆಳೆ ಹಾನಿಯಾಗಿದೆ. ನಷ್ಟವಾದ ರೈತರಿಗೆ ಪರಿಹಾರ ಕೊಡಿಸುತ್ತೇವೆ. ಸರ್ಕಾರ ಪರಿಹಾರ ಕಲ್ಪಿಸುವ ಕೆಲಸ ಮಾಡಲಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಕೃಷ್ಣಾ ನದಿ ತೀರದ ಜನರು ನದಿ ತೀರಕ್ಕೆ ತೆರಳದೆ ಸುರಕ್ಷಿತವಾಗಿ ಇರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ
ಈ ಸಂದರ್ಭದಲ್ಲಿ ವೇಳೆ ಮಲ್ಲಿಕಾರ್ಜುನ ಈಟೆ, ಶರಣಗೌಡ ಕುರಕುಂದಿ, ಶರಣಗೌಡ ಬಲಕಲ್, ಶರಣಗೌಡ ಮಾಲಿಪಾಟೀಲ, ಶಿವಾರೆಡ್ಡಿ ಪಾಟೀಲ ಕೊಳ್ಳುರು ಸೇರಿದಂತೆ ಅನೇಕರು ಇದ್ದರು.