Site icon Vistara News

Yadgiri News: ಯಾದಗಿರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

Madivala Machideva Jayanti program inaugurated by MLA Chennareddy Patila Tunnura in Yadgiri

ಯಾದಗಿರಿ: ಜಿಲ್ಲಾಡಳಿತ, ಜಿ.ಪಂ., ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಸಮಿತಿಯ ಸಹಯೋಗದಲ್ಲಿ (Yadgiri News) ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ (Madivala Machideva Jayanti) ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶರಣರಲ್ಲಿಯೇ ಧೀರ, ದಿಟ್ಟ ವ್ಯಕ್ತಿಯಾಗಿ ವಚನ ಸಾಹಿತ್ಯವನ್ನು ರಕ್ಷಿಸಿದವರು ಮಡಿವಾಳ ಮಾಚಿದೇವರಾಗಿದ್ದು, ಅವರು ತಮ್ಮ ವಚನಗಳ ಮೂಲಕವೇ ಸಮ ಸಮಾಜಕ್ಕೆ ಹೋರಾಡಿ, ನುಡಿದಂತೆ ನಡೆದ, ನಡೆದಂತೆ ನುಡಿದ ಶರಣರಲ್ಲಿ ಕಲ್ಯಾಣ ಕ್ರಾಂತಿಯ ಇತಿಹಾಸದಲ್ಲಿ ಶ್ರೇಷ್ಠರು ಇವರಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Budget 2024: ಬಜೆಟ್‌ನಲ್ಲಿ ಬಾಲಕಿಯರಿಗೆ ಲಸಿಕೆ ಕೊಡುಗೆ; ಏನಿದು ಸರ್ವಿಕಲ್ ಕ್ಯಾನ್ಸರ್?

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಮಾತನಾಡಿ, ಮಡಿವಾಳ ಮಾಚಿದೇವರ ಆದರ್ಶಗಳನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Budget 2024: ಬಜೆಟ್ ಮಂಡಿಸುತ್ತಿದ್ದಂತೆ ರೈಲ್ವೆ ಷೇರುಗಳೇಕೆ ಕುಸಿದವು?

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಪಿಒ ಗುರುನಾಥ ಗೌಡಪ್ಪನ್ನೋರ್, ಡಿವೈಎಸ್ಪಿ ಅರುಣಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಬಿಜಾಸಪುರ, ಪ್ರಧಾನ ಕಾರ್ಯದರ್ಶಿ ನಾಗಪ್ಪ ಮೊಗದಂಪುರ, ಮುಖಂಡರಾದ ಮರಗಪ್ಪ ಸಾಲಿಕೇರಿ, ಜಗನ್ನಾಥ ಚಿಂತನಹಳ್ಳಿ, ಮಾಳಪ್ಪ ಯಾದವ್ ಕಾಡಿಂಗೇರಾ, ಡಾ. ರಾಮು ವಂಕಸಂಬ್ರ, ಸಾಬು ಮಡಿವಾಳ, ಚೆನ್ನಪ್ಪ ಹೊಸಳ್ಳಿ, ಬಸವರಾಜ ಕುರಕುಂದಿ, ರುದ್ರಲಿಂಗ ಮಡಿವಾಳ, ಮರೆಪ್ಪ ಕಟ್ಟಿಮನಿ, ಗಂಗೂ ಮಡಿವಾಳ, ರಾಜು ತುಮಕೂರ, ಸಾಬಣ್ಣ ಕುರಕುಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version