ಯಾದಗಿರಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚೆನ್ನೈ- ಸೂರತ್ ಎಕ್ಸ್‌ಪ್ರೆಸ್ ವೇ ರಸ್ತೆ ನಿರ್ಮಾಣ ಮಾಡುತ್ತಿರುವ ಪರಿಣಾಮ ಜಮೀನಿಗೆ ತೆರಳಲು ರೈತರು ಸಮಸ್ಯೆ ಎದುರಿಸುತ್ತಿದ್ದು, ಬಿಳ್ಹಾರ ಗ್ರಾಮದ ರೈತರು ಕಳೆದ ನಾಲ್ಕು ದಿನಗಳಿಂದ ಜಮೀನಿಗೆ ತೆರಳಲು ಸರ್ವಿಸ್ ರಸ್ತೆ (Service Road) ಹಾಗೂ ಅಂಡರ್ ಪಾಸ್ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಧರಣಿ ಸ್ಥಳಕ್ಕೆ ಭೇಟಿ ನೀಡಿ, ರೈತರ (farmers) ಸಮಸ್ಯೆ ಆಲಿಸಿದರು.
ಕಳೆದ ನಾಲ್ಕು ದಿನಗಳಿಂದ ಬಿಳ್ಹಾರ ಗ್ರಾಮದ ರೈತರು ಬಿಳ್ಹಾರ ಗ್ರಾಮದ ಹೊರಭಾಗದಲ್ಲಿ ನಿರ್ಮಾಣ ಹಂತದ ಹೆದ್ದಾರಿ ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದಾರೆ. ರೈತರ ಧರಣಿ ಮಾಹಿತಿ ಅರಿತು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಭೇಟಿ ನೀಡಿ ಧರಣಿ ನಿರತ ರೈತರ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ರೈತರು, ಶಾಸಕರಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳ ನೋವು ತೋಡಿಕೊಂಡರು.
ಇದನ್ನೂ ಓದಿ: GST Collection: ಅಕ್ಟೋಬರ್‌ನಲ್ಲಿ ದಾಖಲೆಯ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!
ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ನಾನು ಸದಾ ರೈತರ ಕಷ್ಟದ ಜತೆ ಇರುತ್ತೇನೆ, ನಿಮ್ಮ ಕಷ್ಟವನ್ನು ಆಲಿಸಿ, ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ಇದೇ ನ. 7 ರಂದು ಈ ಕುರಿತು ಅಧಿಕಾರಿಗಳ ಸಭೆ ನಡೆಸುತ್ತಿದ್ದು, ರೈತರಿಗೆ ತೊಂದರೆಯಾಗದಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:Fitness Tips: ಸಸ್ಯಾಹಾರ ಮಾತ್ರ ತಿಂದು ಕಟ್ಟುಮಸ್ತಾದ ದೇಹ ಹೊಂದಲು ಸಾಧ್ಯವೇ?
ಈ ವೇಳೆ ಎಸ್ಪಿ ಜಿ.ಸಂಗೀತಾ, ಸಹಾಯಕ ಆಯುಕ್ತ ಹಂಪಣ್ಣಸಜ್ಜನ್, ಮಲ್ಲಿಕಾರ್ಜುನಗೌಡ ಬಿಳ್ಹಾರ, ಬಸ್ಸುಗೌಡ ಬಿಳ್ಹಾರ, ಮರೇಪ್ಪ ಬಿಳ್ಹಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.