Site icon Vistara News

Yadgiri News: ಮಕ್ಕಳು ಶ್ರದ್ಧೆಯಿಂದ ಓದಿದರೆ ಗುರಿ ಸಾಧನೆ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

Navanandi School Decade Celebration Programme at yadgiri

ಯಾದಗಿರಿ: ಮಕ್ಕಳು ಜೀವನದಲ್ಲಿ ಸಮಯ ಪಾಲನೆ, ಶಿಸ್ತು ಪಾಲನೆ ಮಾಡಿಕೊಂಡು ಶ್ರದ್ಧೆಯಿಂದ ಓದಿ ಗುರಿ ಸಾಧಿಸಬೇಕು ಎಂದು ಹೆಡಗಿಮುದ್ರಾಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ (Yadgiri News) ತಿಳಿಸಿದರು.

ನಗರದ ನವನಂದಿ ಶಿಕ್ಷಣ ಸಂಸ್ಥೆಯ ನವನಂದಿ ಶಾಲೆಯ ದಶಕದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಶ್ರೀಗಳು ಆಶೀರ್ವಚನ ನೀಡಿದರು.

ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿನ ಪ್ರತಿಭೆ ಗುರುತಿಸಲು ಸಹಾಯವಾಗಲಿದೆ. ಪೋಷಕರು ಮಕ್ಕಳ ಪ್ರತಿಭೆಯನ್ನು ಅರಿತು ಪ್ರೋತ್ಸಾಹಿಸಬೇಕಿದೆ. ಬದುಕಿನಲ್ಲಿ ಮಕ್ಕಳು ಛಲಹೊಂದಿ ಗುರಿ ಸಾಧಿಸಿ, ಕೀರ್ತಿ ತರುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: Sensex Jump : ಷೇರು ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ; 1000 ಅಂಕಗಳಷ್ಟು ಏರಿಕೆ

ಕಾರ್ಯಕ್ರಮದಲ್ಲಿ ಡಿಡಿಪಿಐ ಮಂಜುನಾಥ್ ಎಚ್.ಟಿ. ಮಾತನಾಡಿ, ನವನಂದಿ ಶಾಲೆಯಲ್ಲಿ ಪಠ್ಯದ ಜತೆಗೆ ಅನೇಕ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿಕೊಂಡು ಬರಲಾಗುತ್ತಿದೆ ಎಂದ ಅವರು, ಮಕ್ಕಳ ಆಸಕ್ತಿ ಅರಿತು ಅವರಿಗೆ ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

ಇದೇ ವೇಳೆ ಶಾಲೆ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಇದನ್ನೂ ಓದಿ: Blast in Bangalore : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾರಿ ಸ್ಫೋಟ; ಐವರು ಗಂಭೀರ

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಎಲ್ಹೇರಿ, ಡಾ.ನೀಲಮ್ಮ ಶಿವರಾಯ ಎಲ್ಹೇರಿ, ಡಾ.ವೀರಭದ್ರಪ್ಪ ಎಲ್ಹೇರಿ, ಶರಣಮ್ಮ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version