Site icon Vistara News

Yadgiri News: ಕಾಯಕದ ಮಹತ್ವ ಸಾರಿದವರು ನುಲಿಯ ಚಂದಯ್ಯ: ಶಾಸಕ ಚೆನ್ನಾರೆಡ್ಡಿ ಪಾಟೀಲ

Nulia Chandayya Jayanti Inauguration

ಯಾದಗಿರಿ: ನುಲಿಯ ಚಂದಯ್ಯನವರ (Nulia Chandayya) ಸಾಮಾಜಿಕ ಸುಧಾರಣೆ (Social Reform), ವಿಶಾಲ ದೃಷ್ಟಿ, ಎಲ್ಲರೂ ಒಂದೇ ಎಂಬ ಭಾವ, ಕಾಯಕ ನಿಷ್ಠೆ, ಲಿಂಗ ಪ್ರೇಮ ಇಂದು ನಮಗೆ ಆದರ್ಶವಾಗಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ತಿಳಿಸಿದರು.

ಜಿಲ್ಲಾಡಳಿತ , ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾದಗಿರಿ ನಗರಸಭೆ ಹಾಗೂ ಶ್ರೀ ನುಲಿಯ ಚಂದಯ್ಯ ಜಯಂತೋತ್ಸವ ಸಮಿತಿ ವತಿಯಿಂದ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಶ್ರೀ ನುಲಿಯ ಚಂದಯ್ಯ ಅವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ಮಾಡಿದ ಕ್ರಾಂತಿಯ ಸುಧಾರಣೆಗಳು ಅದ್ಭುತವಾಗಿವೆ. ಜಾತಿ- ಮತಗಳ ಜಂಜಾಟವನ್ನು ತೊಲಗಿಸಲು ಶ್ರಮಿಸಿದ ಇವರ ವಚನಗಳಲ್ಲಿ ಧರ್ಮ, ನೀತಿ, ತತ್ವ, ಅಧ್ಯಾತ್ಮ ಹೀಗೆ ಪರಿಶುದ್ಧ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳೂ ಅಡಕವಾಗಿವೆ ಎಂದರು.

ಇದನ್ನೂ ಓದಿ: Raichur News: ಸೋಪ್‌, ಚಾಕ್‌ಪೀಸ್‌ಗಳಲ್ಲಿ ಸೂಕ್ಷ್ಮ ಕಲಾಕೃತಿ ಅರಳಿಸುವ ಗ್ರಾಮೀಣ ಪ್ರತಿಭೆ

ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಇಂದು ಸಮಾಜದ ಮುಖ್ಯ ವಾಹಿನಿಗೆ ಬಂದು. ಸಮಾಜದಲ್ಲಿ ಸಾಮರಸ್ಯ‌ದ ಬದುಕು ಅಳವಡಿಸಿಕೊಳ್ಳಬೇಕಾದರೆ ಶಿಕ್ಷಣ ಬಹುಮುಖ್ಯವಾಗಿದ್ದು , ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

ಸುರಪುರದ ಸ್ವಾಮಿ ವಿವೇಕಾನಂದ ಕಾಲೇಜು ಉಪನ್ಯಾಸಕರಾದ ತಿಪ್ಪಣ್ಣ ಭಜಂತ್ರಿ ರುಕ್ಮಾಪುರ ಅವರು ಉಪನ್ಯಾಸ ನೀಡಿ, ಸಮಾಜದ ಸುಧಾರಣೆಗಾಗಿ ಕಾಯಕ ಸೇವೆಯೇ ಧರ್ಮವೆಂದು, ಕಾಯಕದ ಮಹತ್ವವನ್ನು ಜನರಿಗೆ ಸಾರಿ, ಆದರ್ಶ ಮತ್ತು ವ್ಯಕ್ತಿತ್ವವನ್ನು ತಮ್ಮ ಕಾಯಕದ ಮೂಲಕ ಉಳಿಸಿಕೊಂಡು ಬಂದು, ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು ನುಲಿಯ ಚಂದಯ್ಯನವರು ಎಂದರು.

ಇದನ್ನೂ ಓದಿ: NPCI New Products: ಯುಪಿಐ ಮೂಲಕ ಹಣ ಪಾವತಿಸಲು ಇನ್ನು ನಿಮ್ಮ ಧ್ವನಿ ಸಾಕು! ಏನಿದು?

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಉತ್ತರಾದೇವಿ, ಸಮಾಜದ ಜಯಂತೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ಕಾಶಪ್ಪ ಭಜಂತ್ರಿ ಹತ್ತಿಕುಣಿ, ಸಮಾಜದ ಜಿಲ್ಲಾಧ್ಯಕ್ಷ ಯಲಪ್ಪ ಭಜಂತ್ರಿ ವನದುರ್ಗ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Exit mobile version