Site icon Vistara News

Yadgiri News: ಕುಡಿಯುವ ನೀರು ಸರಬರಾಜು ಮೂಲಗಳ ಸ್ವಚ್ಛತೆ, ಶುದ್ಧಗೊಳಿಸಲು ವಿಶೇಷ ಗಮನ ನೀಡಿ: ಮನೋಜ್ ಜೈನ್

Progress review meeting at Yadgiri

ಯಾದಗಿರಿ: ಜಿಲ್ಲೆಯ ನಗರ (City) ಹಾಗೂ ಗ್ರಾಮಾಂತರ ಪ್ರದೇಶಗಳ (Rural areas) ವ್ಯಾಪ್ತಿಯಲ್ಲಿ ಕುಡಿಯುವ ನೀರು (Drinking Water) ಸರಬರಾಜು ಮೂಲಗಳ ಸ್ವಚ್ಛತೆಗೆ ಹಾಗೂ ಶುದ್ಧಗೊಳಿಸಲು ವಿಶೇಷ ಗಮನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಗ್ರಾಮಾಂತರ ಹಾಗೂ ನಗರಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಮೂಲಗಳ ಸ್ವಚ್ಛತೆಗೆ ಹಾಗೂ ಶುದ್ಧಗೊಳಿಸಲು ವಿಶೇಷ ಗಮನ ನೀಡಿಬೇಕು, ಎಂಟು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನೆ ನಿರ್ದೇಶಕರು ಪ್ರತಿನಿತ್ಯ ಭೇಟಿ ನೀಡಿ ಪರಿಶೀಲಿಸಬೇಕು, ಅನುದಾನ ಬಳಕೆ, ಅನುದಾನ ವೆಚ್ಚ ಹಾಗೂ ಬಾಕಿ ಅನುದಾನ ಬಗ್ಗೆ ಪರಿಶೀಲಿಸಬೇಕು, ಅದರಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಪಿಡಿಓಗಳ ಮೂಲಕ ಪರಿಶೀಲನೆ ಆಗಬೇಕು, ನೋಡಲ್ ಅಧಿಕಾರಿಗಳು ಕೂಡ ವಿಶೇಷ ಗಮನ ನೀಡಬೇಕು ಎಂದು ಸೂಚನೆ ನೀಡಿದರು.

ನಗರ ಹಾಗೂ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಕುರಿತಂತೆ ನೀರು ಸರಬರಾಜು ಅಭಿಯಂತರರ ಪ್ರತ್ಯೇಕ ತಂಡಗಳನ್ನು ರಚಿಸಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಗಮನ ನೀಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದನ್ನೂ ಓದಿ: National Nutrition Week 2023: ಈ ಆಹಾರಗಳ ಬಗ್ಗೆ ಎಷ್ಟೊಂದು ಡೌಟ್!‌ ಯಾವುದು ಸತ್ಯ? ಯಾವುದು ಸುಳ್ಳು?

ಜಿಲ್ಲೆಯಲ್ಲಿ ಜಲಜೀವನ ಮಿಷನ್ ಹಾಗೂ ಜಲ ಧಾರೆ ಯೋಜನೆಯಡಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕು, ಜಿಲ್ಲೆಯ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದೂದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನಿಗಮಗಳ ವ್ಯಾಪ್ತಿಯಲ್ಲಿ ವಿವಿಧ ವಸತಿ ನಿಲಯಗಳು, ವಸತಿ ಶಾಲೆಗಳ ವ್ಯಾಪ್ತಿಯಲ್ಲಿ ಅವಶ್ಯಕ ಇರುವ ಮೂಲ ಸೌಕರ್ಯಗಳ ಬಗ್ಗೆ ವಿಧಾನಸಭಾವಾರು ಪರಿಶೀಲನೆ ನಡೆಸಿ ಪ್ರಸ್ತಾವನೆ ತಕ್ಷಣ ಸಲ್ಲಿಸಬೇಕು,

ಅದರಂತೆ ಎಲ್ಲಾ ವಸತಿ ಶಾಲೆ ನಿಲಯಗಳಿಗೆ ಕಂಪೌಂಡ್ ಗೋಡೆಗಾಗಿ ಶೇ.60 ರಷ್ಟು ಅನುದಾನ ಒದಗಿಸಲಾಗುವುದು. ಶೇ. 40 ರಷ್ಟು ಕಾರ್ಮಿಕ ವೆಚ್ಚದ ಅನುದಾನ ಆಯಾ ಇಲಾಖೆಗಳ ವ್ಯಾಪ್ತಿಯಿಂದ ಭರಿಸಿ, ಮಾದರಿ ಯೋಜನೆ ಈ ಜಿಲ್ಲೆಯಿಂದ ಆರಂಭಿಸಲು ತಕ್ಷಣ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಆರೋಗ್ಯ ಇಲಾಖೆಯ ವ್ಯಾಪ್ತಿಯ ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನರ್ ನೀಡುತ್ತಿದ್ದು, ಇದರ ಸೂಕ್ತ ನಿರ್ವಹಣೆಗೆ 3 ವರ್ಷಗಳ ಕಾಲ ಟೆಕ್ನಿಕಲ್ ಅಸಿಸ್ಟಂಟ್ ನೀಡುವ ಕುರಿತಂತೆ ಪ್ರಸ್ತಾವನೆ ಸಿದ್ಧತ ಪಡಿಸಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಶಾಲೆಗಳು, ವಸತಿ ಶಾಲೆಗಳಿಗೆ ಮೂಲ ಸೌಕರ್ಯಗಳ ಇರುವ ಬಗ್ಗೆ ಪರಿಶೀಲನೆ ವರದಿ ಸಲ್ಲಿಸಬೇಕು, ಜಿಲ್ಲೆಯ ಆರು ತಾಲೂಕುಗಳಲ್ಲಿ ತಕ್ಷಣ ಅತಿವೃಷ್ಠಿಯಿಂದ ಹಾನಿಯಾದ ಮನೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: Home Remedies For Mosquito: ರಾಸಾಯನಿಕದ ಅಪಾಯ ಏಕೆ? ಈ ಉಪಾಯ ಬಳಸಿ ಸೊಳ್ಳೆಗಳನ್ನು ಸುಲಭವಾಗಿ ಓಡಿಸಿ!

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಸಾಮಾಜಿಕ ಭದ್ರತಾ ಯೋಜನೆ, ಕಂದಾಯ ಇಲಾಖೆ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಸಂರಕ್ಷಣಾಧಿಕಾರಿ ಕಾಜಲ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version