Site icon Vistara News

Yadgiri News: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಯಾದಗಿರಿಯಲ್ಲಿ ಪ್ರತಿಭಟನೆ

Protest against Neha murder case in Yadgiri

ಯಾದಗಿರಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ, ಆರೋಪಿತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬೇಡ ಜಂಗಮ ಸಮಾಜವು ಜಂಟಿಯಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ (Yadgiri News) ಪ್ರತಿಭಟನೆ ನಡೆಸಲಾಯಿತು.

ನಗರದ ಡಿಸಿ ಕಚೇರಿ ಮುಂಭಾಗ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರು ಸೇರಿ ಪ್ರತಿಯೊಬ್ಬರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Road Accident: ಹೊಳಲ್ಕೆರೆ ಬಳಿ ಕಾರು ಪಲ್ಟಿ; ಶಿವಮೊಗ್ಗ ಮೂಲದ ವ್ಯಕ್ತಿ ಸಾವು, ಇನ್ನಿಬ್ಬರಿಗೆ ಗಾಯ

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದಾಸವಾಳ ಮಠದ ವೀರೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿಎಂ ಹಾಗೂ ಗೃಹ ಸಚಿವರು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ಅವರ ಬೇಜವಾಬ್ದಾರಿತನದ ಹೇಳಿಕೆ ಶೋಭೆ ತರುವಂತದ್ದಲ್ಲ. ಪೋಷಕರು ತನ್ನ ಹೆಣ್ಣು ಮಕ್ಕಳ ಜತೆ ಹೊರ ಹೋಗಲು ಆಗುವುದಿಲ್ಲ. ಸರಕಾರವೇ ಹೆಣ್ಣುಮಕ್ಕಳಿಗೆ ಎಕೆ-47 ಗನ್ ಕೊಡಬೇಕು. ಇದರಿಂದ ಹೆಣ್ಣುಮಕ್ಕಳು ಆತ್ಮರಕ್ಷಣೆ ಮಾಡಲು ಸಾಧ್ಯವಾಗಲಿದೆ ಎಂದರು. ಹೆಣ್ಣುಮಕ್ಕಳಿಗೆ ಸರ್ಕಾರವೇ ದೈಹಿಕ ಸಾಮರ್ಥ್ಯದ ಬಗ್ಗೆ ವಿಶೇಷ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಸಿಎಂ ಹಾಗೂ ಗೃಹ ಸಚಿವರು ಉಡಾಫೆ ಹೇಳಿಕೆ ನೀಡಿ ತಮ್ಮ ಬೇಜವಾಬ್ದಾರಿತನ ತೋರಿದ್ದು ಇಂತಹ ಹೇಳಿಕೆ ನೀಡುವದು ನಿಲ್ಲಿಸಲಿ ಎಂದರು. ಆರೋಪಿತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತೆ ಇಂತಹ ಘಟನೆ ನಡೆಯದಂತೆ ಕಠಿಣ ಕಾಯ್ದೆ ಸರ್ಕಾರ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರು, ಬೇಡ ಜಂಗಮ ಸಮಾಜದ ಮುಖಂಡ ಚನ್ನವೀರಯ್ಯ ಸ್ವಾಮಿ ಕೌಳೂರು, ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ, ವೀರಶೈವ ಸಮಾಜದ ಯವ ಮುಖಂಡ ಅವಿನಾಶ್ ಜಗನ್ನಾಥ, ಶರಣಗೌಡ ಬಾಡಿಹಾಳ, ಸಿದ್ದಪ್ಪ ಹೊಟ್ಟೆ, ಮಲ್ಲಣ್ಣಗೌಡ ಹಳಿಮನಿ ಕೌಳೂರು, ಚನ್ನುಗೌಡ ಬಿಳ್ಹಾರ, ಮಹೇಶ್ ಆನೆಗುಂದಿ, ಬಸವರಾಜ ಸೊನ್ನದ, ಅನ್ನಪೂರ್ಣ ಜವಳಿ, ಅಯ್ಯಣ್ಣ ಹುಂಡೇಕಾರ, ವೀರಭದ್ರಯ್ಯ ಚೌಕಿಮಠ, ಮಹೇಶಕುಮಾರ ಹಿರೇಮಠ, ಪ್ರಭುಲಿಂಗಯ್ಯ ಹಿರೇಮಠ, ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಗುರುಸಣಗಿ, ಮಲ್ಲು ಗುಡಿಮಠ, ಸಿದ್ದರಾಮಯ್ಯ ಸ್ವಾಮಿ ಹೊಸಳ್ಳಿ, ಗೌರಿಶಂಕರ ಹಿರೇಮಠ, ಶ್ರೀಕಾಂತ್ ಸ್ವಾಮಿ ಸೇರಿದಂತೆ ಅನೇಕರು ಇದ್ದರು.

ವಡಗೇರಾ ಪಟ್ಟಣದಲ್ಲಿ ಪ್ರತಿಭಟನೆ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಘಟನೆ ಖಂಡಿಸಿ, ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂದೆ ವಿಶ್ವ ಹಿಂದೂ ಪರಿಷತ್, ಭಜರಂಗದಳ, ವೀರಶೈವ ಸಮಾಜ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ವಡಗೇರಾ ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂಭಾಗ ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ ಖಂಡಿಸಿ, ವಿಎಚ್‌ಪಿ, ಭಜರಂಗದಳ, ವೀರಶೈವ ಸಮಾಜ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ವಡಗೇರಾದ ಮುಖಂಡ ಸಿದ್ದಣ್ಣಗೌಡ ಕಾಡಂನೋರ್, ಡಾ. ಜಗದೀಶ್ ಹಿರೇಮಠ, ಡಾ. ಸುಭಾಷ್ ಕರಣಗಿ, ಅಶೋಕ್ ಸಾಹುಕಾರ ಕರಣಗಿ, ಮಲ್ಲಿಕಾರ್ಜುನ ಕಾಡಂನೋರ್, ದೇವು ಜಡಿ,ಸಂಗುಗೌಡ ಮಾಲಿಪಾಟೀಲ, ಶಂಕ್ರಮ್ಮ ಸೇರಿದಂತೆ ಅನೇಕರು ಇದ್ದರು.

Exit mobile version