Site icon Vistara News

Yadgiri News: ಯಾದಗಿರಿ ಕೃಷ್ಣಾನದಿ ತೀರದ ರೈತರ ಐಪಿಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಆಗ್ರಹಿಸಿ ಪ್ರತಿಭಟನೆ

Protest demanding electricity supply to IPsets of Yadagiri Krishna riverside farmers

ಯಾದಗಿರಿ: ಕೃಷ್ಣಾ ನದಿ (Krishna River) ತೀರದಲ್ಲಿ ರೈತರ ಐಪಿಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಜಿಲ್ಲೆಯ (Yadgiri News) ವಡಗೇರಾ ತಾಲೂಕಿನ ಕದರಾಪುರ ವಿದ್ಯುತ್ ವಿತರಣಾ ಕೇಂದ್ರದ ಮುಂಭಾಗ ಗುರುವಾರ ರೈತರು ಪ್ರತಿಭಟನಾ ಧರಣಿ ನಡೆಸಿದರು.

ವಡಗೇರಾ ತಾಲೂಕಿನ ಕದರಾಪುರ ವಿದ್ಯುತ್ ವಿತರಣಾ ಕೇಂದ್ರದ ಮುಂಭಾಗ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದ ಶಿವನೂರು, ತುಮಕೂರು, ಕದರಾಪುರ, ಇಟಗಿ, ರೊಟ್ನಡಗಿ, ಕೋಡಾಲ, ಗುಂಡ್ಲೂರು ಸೇರಿದಂತೆ ಸುತ್ತಮುತ್ತಲಿನ ಭಾಗದ ರೈತರು, ಯಾವುದೇ ಮಾಹಿತಿ ನೀಡದೇ ಇದ್ದಕ್ಕಿದ್ದಂತೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Ballari News: ಗೋ ಪ್ರೇಮ ಮೆರೆಯುತ್ತಿರುವ ಕಂಪ್ಲಿಯ ಕೇಸರಿ ಗೋ ಸೇವಾ ಪಡೆ

ಪ್ರತಿಭಟನೆಯಲ್ಲಿ ರೈತ ಗುರುನಾಥರೆಡ್ಡಿ ಮಾಲಿಪಾಟೀಲ ಮಾತನಾಡಿ, ವಿದ್ಯುತ್ ಕಡಿತ ಮಾಡುವ ಬಗ್ಗೆ ಯಾವುದೇ ಆದೇಶವಿಲ್ಲ. ರೈತರಿಗೆ ಯಾವುದೇ ಮಾಹಿತಿ ನೀಡದೆ ಐಪಿಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕಡಿತ ಮಾಡಿದ್ದಾರೆ. ನಾವು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಭತ್ತದ ಬೆಳೆ ಬೆಳೆಯುತ್ತಿದ್ದು, ಇನ್ನೂ ಒಂದು ವಾರಗಳ ಕಾಲ ವಿದ್ಯುತ್ ಪೂರೈಕೆ ಮಾಡಿದರೆ ಬೆಳೆಗೆ ನೀರು ಹರಿಸಿಕೊಳ್ಳುತ್ತೇವೆ. ರಾಯಚೂರು ಜಿಲ್ಲೆಯ ಕೃಷ್ಣಾ ನದಿ ತೀರದ ಐಪಿಸೆಟ್‌ಗಳಿಗೆ ಅಲ್ಲಿನ ಜೆಸ್ಕಾಂ ಇಲಾಖೆಯು ವಿದ್ಯುತ್ ಕಡಿತ ಮಾಡಿಲ್ಲ. ಆದರೆ ಯಾದಗಿರಿ ಜಿಲ್ಲೆಯ ಕೃಷ್ಣಾನದಿ ತೀರದ ರೈತರ ಐಪಿಸೆಟ್‌ಗಳಿಗೆ ವಿದ್ಯುತ್‌ ಕಡಿತ ಮಾಡಲಾಗಿದೆ.

ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ತಾರತಮ್ಯ ಮಾಡಿದೆ ಎಂದು ಆರೋಪಿಸಿದ ಅವರು, ಕೂಡಲೇ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: Yadgiri News: ಸಮಾಜ ಸೇವೆಗೆ ಯುವ ಸ್ವಯಂ ಸೇವಕರ ಅವಶ್ಯಕತೆ ಇದೆ: ಮಹೇಶ್ ಕುಮಾರ್

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಲ್ಲಣ್ಣಗೌಡ ಹಗರಟಗಿ, ಶಿವಶಂಕರ್ ಪಾಟೀಲ ಶಿವಪುರ, ಶಂಕರಪ್ಪ ರೊಟ್ನಡಗಿ, ಸೂಗುರಪ್ಪಗೌಡ ಕೋಡಾಲ, ಪಂಪಾರೆಡ್ಡಿ ಕೋಡಾಲ, ನಾಗರಾಜಗೌಡ ಶಿವಪುರ ಸೇರಿದಂತೆ ಅನೇಕರು ಇದ್ದರು.

Exit mobile version