Site icon Vistara News

Yadgiri News: ಯಾದಗಿರಿಯಲ್ಲಿ ಧರಣಿ ನಿರತ ಅತಿಥಿ ಉಪನ್ಯಾಸಕರ ಬೇಡಿಕೆ ಆಲಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ

Protest demanding that the service of guest lecturers should be permanent at yadgiri

ಯಾದಗಿರಿ: ಅತಿಥಿ ಉಪನ್ಯಾಸಕರ (Guest Lecturers) ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಅನಿ‌ರ್ದಿಷ್ಟಾವಧಿ ಧರಣಿ ನಿರತ ಸ್ಥಳಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಆಗಮಿಸಿ ಉಪನ್ಯಾಸಕರ ಬೇಡಿಕೆಗಳನ್ನು ಆಲಿಸಿದರು.

ನಗರದ ವಾಲ್ಮೀಕಿ ವೃತ್ತದ ಸಮೀಪದ ಸರ್ಕಾರಿ ಪದವಿ ಕಾಲೇಜು ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದು, ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಸರಿಯಾಗಿ ವೇತನವಾಗುತ್ತಿಲ್ಲ. ಇದರಿಂದ ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಶಾಸಕರ ಮುಂದೆ ಅತಿಥಿ ಉಪನ್ಯಾಸಕರು ನೋವು ತೋಡಿಕೊಂಡರು.

ಇದನ್ನೂ ಓದಿ: Wedding Season: ಮುಂದಿನ ತಿಂಗಳು 38 ಲಕ್ಷ ಮದುವೆ! ಎಷ್ಟು ಲಕ್ಷ ಕೋಟಿ ವ್ಯವಹಾರ ಊಹಿಸಿ!

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಕಾಯಂ ಮಾಡುವುದಾಗಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಿ ನುಡಿದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಸ್ಪಂದಿಸಿ, ನುಡಿದಂತೆ ನಮ್ಮ ಸರ್ಕಾರ ನಡೆಯುತ್ತಿದೆ. ಸೇವೆ ಕಾಯಂ ಮಾಡುವ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರ ಜತೆ ನಮ್ಮ ಸರ್ಕಾರವಿದೆ. ನಮ್ಮ ಸರ್ಕಾರವು ನಿಮ್ಮ ಕಾಳಜಿ ತೊರುತ್ತದೆ. ನಾವು ಈ ಬಗ್ಗೆ ಬೇಡಿಕೆ ಈಡೇರಿಕೆಗೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Ind vs Aus : ತಿರುವನಂತಪುರ ತಲುಪಿದ ಸೂರ್ಯಕುಮಾರ್ ಬಳಗ

ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ಯಾದಗಿರಿ ಜಿಲ್ಲಾ ಘಟಕದ ಡಾ.ಸಿದ್ದರಾಜರೆಡ್ಡಿ, ಡಾ.ಸುರೇಶ ಮಠ, ಡಾ. ಚಂದ್ರಪ್ರಸಾದ್‌ ಹೊಸಮನಿ, ಡಾ. ಭೀಮರಾಯ ಲಿಂಗೇರಿ, ಸಿದ್ದಣ್ಣಗೌಡ ಪಾಟೀಲ, ಸಾಹೇಬರೆಡ್ಡಿ, ಲಕ್ಷ್ಮಣ ರೆಡ್ಡಿ, ಡಾ. ಕಮಲಮ್ಮ, ಡಾ.ಜ್ಯೋತಿ, ಜ್ಯೋತಿ ಪಾಟೀಲ, ಅಂಬೀಕಾರೆಡ್ಡಿ,ಗೀತಾಬಾಯಿ, ವಿಜಯಲಕ್ಷ್ಮಿ ಕೇತನಕರ್, ಡಾ.ಶಾಮಲಾ, ಜಯಶ್ರೀ, ಶಿಲ್ಪಾ, ಪುಷ್ಪಾ, ಗೌರಮ್ಮ, ಜ್ಯೋತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Exit mobile version