Site icon Vistara News

Yadgiri News: ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಾಯಕ: ಶರಣಗೌಡ ಕಂದಕೂರು

Science fair programme at Yadgiri

ಯಾದಗಿರಿ: ಆಧುನಿಕತೆ ಭರಾಟೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳಿಂದ ತಂತ್ರಜ್ಞಾನ (Technology) ಬಳಕೆ ಹೆಚ್ಚಾಗುತ್ತಿದೆ. ವಿಜ್ಞಾನ ವಸ್ತುಗಳ ಪ್ರದರ್ಶನವು ಮಕ್ಕಳಿಗೆ ವೈಜ್ಞಾನಿಕ ಜ್ಞಾನ ಹೆಚ್ಚಿಸಲು ಸಹಾಯಕವಾಗಿದೆ ಎಂದು ಶಾಸಕ ಶರಣಗೌಡ ಕಂದಕೂರು (Yadgiri News) ತಿಳಿಸಿದರು.

ನಗರದ ಶಾಂತಿ ಸದನ ಶಾಲೆಯಲ್ಲಿ ಅಗಸ್ತ್ಯ ಫೌಂಡೇಶನ್ ಸಹಯೋಗದೊಂದಿಗೆ ವಿಜ್ಞಾನ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳಲ್ಲಿ ಜ್ಞಾನ ಮಟ್ಟ ಸುಧಾರಣೆ ಕಾಣಲಿದೆ. ವಿಜ್ಞಾನ ಮೇಳ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಾಯಕವಾಗಿದೆ ಎಂದರು.

ಇದನ್ನೂ ಓದಿ: Money Guide: EPF vs PPF; ಈ ಎರಡು ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ವಿವರ

ಈ ಕಾರ್ಯಕ್ರಮವು ಮಕ್ಕಳ ಪ್ರತಿಭೆ ಗುರುತಿಸುವ ವೇದಿಕೆಯಾಗಿದೆ‌. ಮಕ್ಕಳು ಆಸಕ್ತಿ ತಿಳಿದುಕೊಳ್ಳಲು ಈ ಮೇಳ ಸಹಾಯವಾಗಲಿದೆ‌. ಶಾಂತಿ ಸದನ ಶಾಲೆಯು ಹಮ್ಮಿಕೊಂಡ ಈ ಕಾರ್ಯಕ್ರಮವು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಶಾಲೆಯ ಪ್ರಾಂಶುಪಾಲ ಸಂತೋಷ ದಾಸ್ ಮಾತನಾಡಿ, ಮಕ್ಕಳು ಆಸಕ್ತಿ ವಹಿಸಿ ಈ ಮೇಳದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶನ ಮಾಡಿದ್ದಾರೆ. ಆಹಾರ ಮೇಳದಿಂದ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ. ವಿಜ್ಞಾನ ಮೇಳವು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಅರಿವು ಮೂಡಿಸಲು ನೆರವಾಗಲಿದೆ ಎಂದರು.

ಇದನ್ನೂ ಓದಿ: Aadhaar seeding: ಪಹಣಿಗೂ ಮಾಡಿ ಆಧಾರ್ ಲಿಂಕ್;‌ ‘ಲಿಂಕಿಂಗ್‌’ ಲೋಕದಲ್ಲಿ ರೈತ ಹೈರಾಣ!

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಾಹೇಬರೆಡ್ಡಿ ಬಕ್ಕಾ, ಡಾ.ಸುದತ್ ದರ್ಶನಾಪುರ, ಸಾಬಣ್ಣ, ಬಸವಂತರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version