ಯಾದಗಿರಿ: ಸಾಮಾಜಿಕ ಕಾರ್ಯಗಳಿಂದ ಸಿಗುವಷ್ಟು ಆತ್ಮತೃಪ್ತಿ ಬೇರೆ ಯಾವುದರಿಂದ ಸಿಗುವುದಿಲ್ಲ ಎಂದು ಗುರುಮಿಠಕಲ್ ಖಾಸಾ ಮಠದ ಪೀಠಾಧಿಪತಿ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ (Yadgiri News) ತಿಳಿಸಿದರು.
ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಸದ್ಗುರು ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ಭಗವಂತ ನಮಗೆ ನೀಡಿರುವ ದೈನಂದಿನ ಕಾಯಕದ ಜತೆಗೆ ಸಂಪಾದಿಸಿದ ಸ್ವಲ್ಪ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದರೆ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ, ಅಲ್ಲದೇ ಅಂತಹ ವ್ಯಕ್ತಿಗಳ ಸಾಧನೆ, ಹೆಸರು ಚರಿತ್ರೆಯಲ್ಲಿ ಉಳಿಯುತ್ತದೆ ಎಂದರು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಇಂದು ತುಸು ಏರಿಕೆ; 22K, 24K ಬಂಗಾರದ ಬೆಲೆಗಳನ್ನು ಇಲ್ಲಿ ಖಚಿತಪಡಿಸಿಕೊಳ್ಳಿ
ಈ ದಿಸೆಯಲ್ಲಿ ಯುವಕರಾಗಿರುವ ಮಹಾರಾಜ ದಿಗ್ಗಿಯವರು ಇಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುವ ಮೂಲಕ ಸಾಮರಸ್ಯ ವಾತಾವರಣ ಸೃಷ್ಟಿ ಮಾಡಿ, ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ, ಎಲ್ಲಾ ವರ್ಗದ ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ, ಇದು ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಸರೂರ-ಅಗತೀರ್ಥ ಗುರು ಪೀಠದ ಶಾಂತಮಯ ಸ್ವಾಮೀಜಿ, ಚಿಗರಳ್ಳಿಯ ಕಬೀರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಲಹಳ್ಳಿಯ ಕೆಂಚರಾಯ ಪೂಜಾರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಯಿ ಮಂದಿರದ ಅಧ್ಯಕ್ಷ ಮಹಾರಾಜ್ ದಿಗ್ಗಿ ಮಾತನಾಡಿ, ಎಲ್ಲರ ಸಹಕಾರದಿಂದ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಇನ್ನೂ ಹಲವಾರು ಸಂಕಲ್ಪಗಳಿವೆ, ಆ ಭಗವಂತ ಶಕ್ತಿ ನೀಡಿದರೆ ಖಂಡಿತ ಈ ಭಾಗಕ್ಕೆ ಸದಾ ಒಳಿತಾಗುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 14 ಜೋಡಿ ನವ ವಧು-ವರರಿಗೆ ಎಲ್ಲಾ ಶ್ರೀಗಳು, ಗಣ್ಯರು ಶುಭ ಹಾರೈಸಿದರು.
ಇದನ್ನೂ ಓದಿ: Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!
ದೋರನಹಳ್ಳಿಯ ಚಿಕ್ಕಮಠದ ಶಿವಲಿಂಗರಾಜೇಂದ್ರ ಸ್ವಾಮೀಜಿ, ಸೂಗೂರ ಎನ್. ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ಹಿರಗಪ್ಪ ತಾತನವರು, ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ, ಹೋತಪೇಟ್‌ದ ಕೈಲಾಸ ಮಠದ ಶಿವಲಿಂಗೇಶ್ವರ ಸ್ವಾಮೀಜಿ, ಗೋಗಿಯ ಸೈಯದ್ ಷಾ ಚಾಂದ್ ಹುಸೇನಿ, ಶಹಾಬಾದದ ಅಪ್ಪಣ್ಣ ಶ್ರೀಗಳು, ಗಬ್ಬೂರವಾಡಿಯ ಬಳಿರಾಮ ಮಹಾರಾಜರು, ದೇವಸ್ಥಾನದ ಕಾರ್ಯದರ್ಶಿ ಸಿದ್ದಪ್ಪಾಜಿ, ಸಿದ್ದಣ್ಣ ದಿಗ್ಗಿ, ಭೀಮರಡ್ಡಿ ರಾಂಪೂರಹಳ್ಳಿ ಹತ್ತಿಕುಣಿ, ಗೌಡಪ್ಪಗೌಡ ಆಲ್ದಾಳ, ಭೀಮಾಶಂಕರ ಇಬ್ರಾಹಿಂಪುರ, ಶಂಕ್ರಪ್ಪ ಶಾಣೇನೋರ ದೋರನಹಳ್ಳಿ, ಶ್ರೀಶೈಲ ಹೊಸಮನಿ, ಬಸವರಾಜ ರಾಠೋಡ, ಮಲ್ಲಿಕಾರ್ಜುನ ಮೌನೇಶ ಹಳಿಸಗರ, ಡಾ. ರವೀಂದ್ರನಾಥ ಹೊಸಮನಿ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.