Site icon Vistara News

Yadgiri News: ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಮಪತ್ರ ಸಲ್ಲಿಕೆ

Surapura Assembly Constituency By election BJP candidate Raju Gowda filed nomination

ಯಾದಗಿರಿ: ಲೋಕಸಭಾ ಚುನಾವಣೆ ಜತೆ ಸುರಪುರ ವಿಧಾನಸಭೆ ಕ್ಷೇತ್ರದ (Surapura Assembly Constituency) ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆ ಹಿನ್ನಲೆ ಬಿಜೆಪಿ ಅಭ್ಯರ್ಥಿ ರಾಜುಗೌಡ ಗುರುವಾರ ರೋಡ್ ಶೋ ನಡೆಸಿ ನಾಮಪತ್ರ (Yadgiri News) ಸಲ್ಲಿಸಿದರು.

ಸುರಪುರ ಶಾಸಕರಾಗಿದ್ದ ರಾಜಾವೆಂಕಟಪ್ಪ ನಾಯಕ ಅವರು ಅಕಾಲಿಕ ನಿಧನರಾದ ಹಿನ್ನಲೆ ಅವರ ತೆರವಾದ ಸ್ಥಾನಕ್ಕೆ ಸುರಪುರ ಕ್ಷೇತ್ರದ ಉಪಚುನಾವಣೆಯು ನಡೆಯುತ್ತಿದ್ದು, ಮೇ 7 ರಂದು ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಸುವ ಮುನ್ನ ರಾಜುಗೌಡ ಅವರು ಬೆಳಿಗ್ಗೆ ಸುರಪುರ ನಗರದಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಹಾಗೂ ಬನಶಂಕರಿ ದೇವಾಲಯಕ್ಕೆ ಕುಟುಂಬಸ್ಥರ ಜತೆ ತೆರಳಿ ಗೆಲುವಿಗಾಗಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ನಂತರ ಗಾಂಧಿ ವೃತ್ತದ ಸಮೀಪದ ನಗರಸಭೆ ಕಚೇರಿಯಿಂದ ತಹಸೀಲ್ದಾರ್‌ ಕಚೇರಿವರಗೆ ಬಿಜೆಪಿ ಅಭ್ಯರ್ಥಿ ರಾಜುಗೌಡ, ಬೃಹತ್ ರೋಡ್ ಶೋ ನಡೆಸಿದರು.

ಬಳಿಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ನೀರಾವರಿ ಯೋಜನೆ ಹಾಗೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ‌. ಸುರಪುರ ನಗರಕ್ಕೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ. ನಾರಾಯಣಪುರ ಜಲಾಶಯದಿಂದ ಕಾಲುವೆ ಮೂಲಕ ರೈತರ ಜಮೀನಿಗೆ ಎರಡು ಅವಧಿ ನೀರು ಪೂರೈಕೆ ಮಾಡಿದ್ದೇನೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಯು ಯಾವುದೇ ಪರಿಣಾಮ ಬೀರಲ್ಲ‌.ಈಗ ಜಲಾಶಯದಲ್ಲಿ ನೀರು ಇದ್ದರೂ ರೈತರ ಜಮೀನಿಗೆ ನೀರು ಬಿಡುತ್ತಿಲ್ಲ‌. ಸರ್ಕಾರದ ಗ್ಯಾರಂಟಿ ಯೋಜನೆಗಳು ಕಣ್ಣು ಒರೆಸುವ ತಂತ್ರವಾಗಿದೆ ಎಂದು ಆರೋಪಿಸಿದ ಅವರು, ಸುರಪುರ ಕ್ಷೇತ್ರದಲ್ಲಿ ಜನರು ಬೆಂಬಲ ನೀಡುತ್ತಿದ್ದು ಜನರ ಶ್ರೀರಕ್ಷೆಯಿಂದ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Money Guide: ತುರ್ತು ಚಿಕಿತ್ಸೆಗೆ ಪಿಎಫ್​ನಿಂದ 1 ಲಕ್ಷ ರೂ. ಪಡೆಯಬಹುದು; ಹೇಗೆ ಗೊತ್ತಾ?

ಈ ಸಂದರ್ಭದಲ್ಲಿ ಎಂಎಲ್‌ಸಿ ಹೇಮಲತಾ ನಾಯಕ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಉದ್ಯಮಿ ದಯಾನಂದ, ರಾಜಾ ಹಣಮಪ್ಪ ತಾತಾ, ಎಚ್.ಸಿ. ಪಾಟೀಲ, ಬಸವರಾಜ ಸ್ಥಾವರಮಠ ಸೇರಿದಂತೆ ಅನೇಕರು ಇದ್ದರು.

Exit mobile version