Site icon Vistara News

Yadgiri News: ನಿಸ್ವಾರ್ಥ ಸೇವೆಯಿಂದ ಮಾತ್ರ ಬದುಕಿನ ಮೌಲ್ಯ ವೃದ್ಧಿ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

Value of life increases only through selfless service says MLA Channareddy Patila Tunnuru

ಯಾದಗಿರಿ: ನಿಸರ್ಗದಲ್ಲಿ ಆ ಭಗವಂತ ಪ್ರತಿಯೊಬ್ಬರಿಗೂ ಸಮಾಜದಲ್ಲಿ ದೈವದತ್ತವಾಗಿ ಕ್ಷೇತ್ರವನ್ನು ನೀಡುತ್ತಾನೆ, ಯಾರು ಆ ಕ್ಷೇತ್ರದಲ್ಲಿ ಉತ್ಸಾಹದಿಂದ, ಕರ್ತವ್ಯ ಪ್ರಜ್ಞೆ ಮೈಗೂಡಿಸಿಕೊಂಡು ನಿಸ್ವಾರ್ಥದಿಂದ ಕೆಲಸ ಮಾಡುತ್ತಾರೆ, ಅವರ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Yadgiri News) ಅಭಿಪ್ರಾಯಪಟ್ಟರು.

ನಗದರ ಕೆಇಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ನೀಲಮ್ಮ ಎಸ್. ರಡ್ಡಿ ಯಲ್ಹೇರಿ ಅವರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ನೀಲಮ್ಮ ಅವರು ಮದ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ಪರಿಶ್ರಮದಿಂದ ಅಭ್ಯಾಸ ಮಾಡಿ, ವೈದ್ಯರಾಗಿ ಜೀವನದಲ್ಲಿ ಸರಳತೆ, ಸಮಯಪ್ರಜ್ಞೆ, ಕಾಯಕತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಬದಲಾವಣೆಗೆ ಶ್ರಮಿಸಿದ್ದಾರೆ, ಅಲ್ಲದೇ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ, ಅವರ ಕಾರ್ಯವೈಖರಿ ಯುವ ವೈದ್ಯರಿಗೆ ಮಾದರಿಯಾಗಲಿ ಎಂದು ತಿಳಿಸಿದರು.

ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್‌; SCDCC ಬ್ಯಾಂಕ್‌ನಲ್ಲಿದೆ 123 ಹುದ್ದೆ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಐಎಂಎ ಅಧ್ಯಕ್ಷ ಡಾ. ಭಗವಂತ ಅನವಾರ ಮಾತನಾಡಿದರು,

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ನೀಲಮ್ಮ ಎಸ್. ರಡ್ಡಿ ಯಲ್ಹೇರಿ, ನಾನು ಮಾಜಿ ಸಚಿವ ಡಾ. ಎ.ಬಿ. ಮಾಲಕರಡ್ಡಿ ಅವರ ಮಾರ್ಗದರ್ಶನದಲ್ಲಿ, ತಂದೆ-ತಾಯಿ ಎಲ್ಲರ ಸಹಕಾರದಿಂದ ವೈದ್ಯೆಯಾಗಿ ಸರ್ಕಾರಿ ಸೇವೆಯಲ್ಲಿ ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ, ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗಿರುವುದು ಬಹಳಷ್ಟಿದೆ, ಅದಕ್ಕೆ ನನ್ನ ಆರೋಗ್ಯ ಹಾಗೂ ನಿಸರ್ಗ ಸಹಕರಿಸಬೇಕು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Kannada New Movie: ಮೈಸೂರಿನ 100 ವರ್ಷಗಳ ಹಳೇ ಮನೆಯಲ್ಲಿ ʼಫಾದರ್ʼ ಸಿನಿಮಾ ಚಿತ್ರೀಕರಣ

ಕಾರ್ಯಕ್ರಮದಲ್ಲಿ ಯಲ್ಹೇರಿ ಶಿವಶಂಕರ ಮಠದ ಪೀಠಾಧಿಪತಿ ಕೊಟ್ಟುರೇಶ್ವರ ಸ್ವಾಮಿಜಿ, ಡಾ, ವಿಜಯಕುಮಾರ, ನಾಗರತ್ನ ಕುಪ್ಪಿ, ನಾಗರತ್ನ ಅನಪೂರ, ಡಾ. ಪ್ರಸನ್ನ ಪಾಟೀಲ, ಡಿಎಚ್‌ಒ ಡಾ. ಪ್ರಭುಲಿಂಗ ಮಾನಕರ್, ಹಿರಿಯ ನ್ಯಾಯವಾದಿ ಎಸ್.ಬಿ ಪಾಟೀಲ, ಹಿರಿಯ ವೈದ್ಯರಾದ ಡಾ. ಜಿ.ಡಿ ಹುನಗುಂಟಿ, ಡಾ. ವೀರಭದ್ರಪ್ಪ ಯಲ್ಹೇರಿ, ಡಾ. ರಿಜ್ವಾನ ಅಫ್ರೀನ್, ಎಚ್.ಸಿ ಪಾಟೀಲ್ ರಾಜನಕೊಳೂರ, ಮಲ್ಕರಡ್ಡಿ ಮಾಲಿ ಪಾಟೀಲ್ ಅರಕೇರಾ. ಬಿ, ಸಿದ್ದಪ್ಪ ಲಿಂಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಡಾ. ಶೈಲಶ್ರೀ ಎಸ್. ರಡ್ಡಿ ಸ್ವಾಗತಿಸಿದರು.

Exit mobile version