Site icon Vistara News

Yadgiri News: ವಿಶ್ವಗುರು ಬಸವಣ್ಣನವರ ಕಾಯಕ ತತ್ವ ಪಾಲಿಸಿ: ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ

Vishwaguru Basavanna portrait unveiling program at Yadgiri

ಯಾದಗಿರಿ: ರಾಜ್ಯ ಸರ್ಕಾರವು ವಿಶ್ವಗುರು, ಜಗಜ್ಯೋತಿ ಬಸವಣ್ಣನವರನ್ನು (Vishwaguru Basavanna) ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಬಸವಣ್ಣನವರ ಕಾಯಕ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಬೇಕು ಎಂದು ಗುರುಮಠಕಲ್‌ನ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ (Yadgiri News) ಅಭಿಪ್ರಾಯಪಟ್ಟರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಶ್ರೀಗಳು ಮಾತನಾಡಿದರು.

ಇದನ್ನೂ ಓದಿ: INSAT-3DS Launch: ಇಸ್ರೋ ಮೈಲುಗಲ್ಲು; ಇನ್‌ಸ್ಯಾಟ್‌-3ಡಿಎಸ್ ಉಪಗ್ರಹ ಉಡಾವಣೆ ಯಶಸ್ವಿ

ವಿಶ್ವಗುರು ಬಸವಣ್ಣನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವ ಜತೆಗೆ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ವಾಕ್ಯದ ಬಸವಣ್ಣನವರ ಭಾವಚಿತ್ರ ಅಳವಡಿಕೆ ಮಾಡಲು ಸರ್ಕಾರಿ ಕಚೇರಿಯಲ್ಲಿ ಕಡ್ಡಾಯಗೊಳಿಸಿದ್ದಾರೆ.

ಬಸವಣ್ಣನವರ ಕಾಯಕದ ಮಹತ್ವ, ವರ್ಗರಹಿತ ಸಮಾಜ ಮತ್ತು ಅವರ ವಚನಗಳು ಬದುಕಿಗೆ ದಾರಿ ದೀಪವಾಗಿವೆ. ಅನೇಕ ವಚನಗಳ ಮೂಲಕ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸಮಾಜಕ್ಕೆ ಸಂದೇಶ ಸಾರಿದ್ದಾರೆ. ಶರಣರ ಹಾದಿಯಲ್ಲಿ ನಾವು ಮಾದರಿ ಬದುಕುಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Ravindra Jadeja : ತವರು ನೆಲದಲ್ಲಿ ಹೊಸ ಮೈಲ್ಲುಗಲ್ಲು ಸ್ಥಾಪಿಸಿದ ರವೀಂದ್ರ ಜಡೇಜಾ

ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್ ರಡ್ಡಿ ಮುದ್ನಾಳ, ಶರಣಗೌಡ ಬಾಡಿಯಾಳ, ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರು, ಅಯ್ಯಣ್ಣ ಹುಂಡೇಕಾರ, ಡಾ. ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೊಸಂಬಿ, ಸೋಮನಾಥ ಜೈನ್, ದೇವಿಂದ್ರರೆಡ್ಡಿ ಯಡ್ಡಳ್ಳಿ, ಚೆನ್ನಪ್ಪ ಅಕ್ಕಿ, ರಾಜಶೇಖರ ಉಪ್ಪಿನ್, ಅನ್ನಪೂರ್ಣಮ್ಮ ಜವಳಿ, ಅನೀಲ್ ಕುಮಾರ ಲೇವಡಿ, ರಾಜು ಶಾಸ್ತ್ರೀ ರಾಮಗಿರಿ ಮಠ, ಶರಣು ಪಡಶೆಟ್ಟಿ, ಸುಭಾಷ್ ದೇವದುರ್ಗ, ಮಂಜುನಾಥ ಹೊಟ್ಟೆ, ಸುರೇಶ ಜಾಕಾ, ನಾಗೇಶ್ ಮಳಬಾಗಲಿ ಮಠ, ಸುನೀಲ್ ಕಡೇಚೂರು, ಮಹೇಶ ಹಿರೇಮಠ, ಶರಣು ಇಡ್ಲೂರು, ಅಭಿಷೇಕ್ ಮಂಜನಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version