Site icon Vistara News

Yadgiri News: ಯಾದಗಿರಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ

World Tourism Day programme inauguration by ADC Sharanabasappa Koteppagola at Yadgiri

ಯಾದಗಿರಿ: ದೇಶ ಸುತ್ತುವುದರಿಂದ ಕೋಶ ಓದುವುದರಿಂದ ನಮ್ಮ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ ಹೆಚ್ಚಾಗಿ ದೇಹ, ಮನಸ್ಸುಗಳಲ್ಲಿ ಚೈತನ್ಯ ತುಂಬುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕಲಾನಿಕೇತನ ಟ್ರಸ್ಟ್ ವತಿಯಿಂದ ನಗರದ ಲುಂಬಿನಿ ವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಗಿಡನೆಟ್ಟು ನೀರೆರೆದು, ಜಿಲ್ಲೆಯ ಪ್ರವಾಸಿ ತಾಣಗಳ ಕೈಪಿಡಿ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ದೇಶದ ಆರ್ಥಿಕತೆ ಸದೃಢಗೊಳಿಸುವಲ್ಲಿ ಪ್ರವಾಸೋದ್ಯಮ ಸಹಕಾರಿಯಾಗಿದೆ. ಪ್ರವಾಸಿ ತಾಣಗಳನ್ನು ನೋಡುವುದರಿಂದ ಹಲವು ಪ್ರಯೋಜನಗಳಿವೆ. ಮಾನಸಿಕವಾಗಿ ನಾವು ನೆಮ್ಮದಿಯಿಂದ ಇದ್ದಾಗ ದೈಹಿಕವಾಗಿ ಸದೃಢರಾಗುತ್ತೇವೆ ಎಂದರು.

ಇದನ್ನೂ ಓದಿ: LinkedIn Top Startups 2023: ಲಿಂಕ್ಡ್‌ಇನ್ ಭಾರತದ ಟಾಪ್ 20 ಸ್ಟಾರ್ಟಪ್‌ ಲಿಸ್ಟ್‌, ಅಗ್ರ 2 ಸ್ಥಾನದಲ್ಲಿ ಝೆಪ್ಟೋ, ಬ್ಲೂಸ್ಮಾರ್ಟ್

ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಪಾಠದ ಜತೆ ಮುಂದಿನ ಜೀವನದ ಕನಸು ಕಾಣಬೇಕು. ಆ ಕನಸು ನಿಮ್ಮ ನಿದ್ದೆಗೆಡಿಸುವಂತೆ ಇರಬೇಕು. ಅಂದಾಗ ಮಾತ್ರ ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇತಿಹಾಸ ತಜ್ಞ ಹಾಗೂ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.

ಇದೇ ವೇಳೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ಮಕ್ಕಳಿಗೆ ಪ್ರಬಂಧ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಇದನ್ನೂ ಓದಿ: Viral News: ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ₹18 ಲಕ್ಷ ರೂ. ತಿಂದು ಹಾಕಿದ ಗೆದ್ದಲು! ಮುಂದೇನು?

ಈ ಸಂದರ್ಭದಲ್ಲಿ ಬಾಲಕಾರ್ಮಿಕ ನಿರ್ಮೂಲನೆಯ ಯೋಜನೆ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಕಲಾನಿಕೇತನ ಟ್ರಸ್ಟ್‌ನ ಬಸವರಾಜ ಸಿನ್ನೂರ, ಪೊಲೀಸ್ ಅಧಿಕಾರಿ ವೆಂಕಟರೆಡ್ಡಿ ಎಸ್, ಪ್ರವಾಸೋದ್ಯಮ ಇಲಾಖೆಯ ಪರಮೇಶ್ವರ , ಹಿರಿಯ ಮುಖಂಡರಾದ ಶಾಂತಗೌಡ ಪಾಟೀಲ, ಲಿಂಗನಗೌಡ, ಗುರುಪ್ರಸಾದ್ ವೈದ್ಯ, ಸಂಗೀತಗಾರರಾದ ಮಲ್ಲಿಕಾರ್ಜುನ ಮತ್ತು ಮಲ್ಲಯ್ಯ ಶಹಾಪುರ ಸೇರಿದಂತೆ ವಿದ್ಯಾರ್ಥಿಗಳು, ಲುಂಬಿನಿ ವನದ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version