Site icon Vistara News

Yadgiri News | ಯಾದಗಿರಿಯಲ್ಲಿ ವರಾಹಕ್ಕೆ ಹಾಲುಣಿಸಿದ ಗೋಮಾತೆ : ವಿಸ್ಮಯ ಕಂಡು ಅಚ್ಚರಿಗೊಂಡ ಭಕ್ತರು!

Yadgiri News

ಯಾದಗಿರಿ : ಕೃಷ್ಣ ಜನ್ಮಾಷ್ಟಮಿ ದಿನದಂದು ಗೋಮಾತೆ, ವರಾಹಕ್ಕೆ ಹಾಲುಣಿಸಿದ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ (Yadgiri News) ವೇಣುಗೋಪಾಲ ಸ್ವಾಮಿ ದೇಗುಲದ ಆವರಣದಲ್ಲಿ ಗೋವು ತನ್ನ ಕರುವಿನೊಂದಿಗೆ ವರಾಹಕ್ಕೆ ಹಾಲುಣಿಸಿದೆ.

ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಹಾಲೋಕುಳಿ ಜಾತ್ರೆ ನಡೆದಿತ್ತು. ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನವೇ ವಿಸ್ಮಯ ಸಂಗತಿ ನಡೆದಿದೆ. ಗೋವು ತನ್ನ ಕರುವಿಗೆ ಹಾಲುಣಿಸುವಾಗ ವರಾಹಕ್ಕೆ ಹಾಲುಣಿಸಿದೆ. ಅಷ್ಟೇ ಅಲ್ಲದೇ ವರಾಹಾಕ್ಕೆ ಗೋವು ಹಾಲುಣಿಸುವಾಗ ಕರು ತಾಯಿ ಹತ್ತಿರವೇ ನಿಂತಿತ್ತು. ವರಾಹಕ್ಕೆ ಹಾಲುಣಿಸುವ ವಿಡಿಯೊವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. ಇದೀಗ ವಿಡಿಯೊ ವೈರಲ್‌ ಆಗಿದೆ. ಹಾಗೂ ಈ ದೃಶ್ಯವನ್ನು ನೋಡಿ ಭಕ್ತರು ಸಂತಸ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ | Yadgiri Bank Fraud | ಮತ್ತೊಂದು ʼಸಹಕಾರʼ ಅವಾಂತರ; ಕೋಟಿ ಕೋಟಿ ಹಣ ಎತ್ತಿಕೊಂಡು ಓಡಿದ ಸಿಇಒ!

Exit mobile version