Site icon Vistara News

Yadgiri News: ಪರಿಸರ ಸಂರಕ್ಷಣೆಗೆ ಇರಲಿ ಎಲ್ಲರ ಕಾಳಜಿ: ಸಂಗಮೇಶ ಉಪಾಸೆ

World Environment Day celebration at yadgiri

ಯಾದಗಿರಿ: ವಿಶ್ವ ಪರಿಸರ ದಿನಾಚರಣೆಯ (World Environment Day) ಅಂಗವಾಗಿ ಸೋಮವಾರ ಜಿಲ್ಲೆಯ ಕನಕ ವೃತ್ತದಲ್ಲಿರುವ ಮಹಾತ್ಮ ಗಾಂಧಿ (Mahatma Gandhi) ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.

ಶಾಂತಿ ಸದನ ಆಂಗ್ಲ ಮಾಧ್ಯಮ ಶಾಲೆ, ಪ್ರತೀಕ್ಷಾ ಸೇವಾ ಸಂಸ್ಥೆ, ನಗರಸಭೆ ಹಾಗೂ ಅರಣ್ಯ ಇಲಾಖೆ, ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಇದನ್ನೂ ಓದಿ: ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್‌ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ

ಬಳಿಕ ಮಾತನಾಡಿದ ಅವರು, ಅರಣ್ಯ ನಾಶದಿಂದ ಈಗ ತಾಪಮಾನ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಪರಿಸರದ ಕಾಳಜಿ ತೊರಬೇಕಿದೆ. ಪ್ರತಿಯೊಬ್ಬರೂ ಮನೆ ಮುಂದೆ ಸಸಿ ನೆಡಬೇಕಿದೆ, ಸಸಿಗಳನ್ನು ನೆಟ್ಟು ಮರ ಗಿಡಗಳನ್ನು ಬೆಳೆಸಿ ಅರಣ್ಯ ಸಂಪತ್ತು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಶಾಂತಿ ಸದನ ಶಾಲೆಯ ಕಾರ್ಯದರ್ಶಿ ಬಸವಂತರೆಡ್ಡಿ, ಪ್ರತೀಕ್ಷಾ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದು ಪಾಟೀಲ, ಶಾಲೆ‌ ಮಕ್ಕಳು ಹಾಗೂ ಪರಿಸರ ಪ್ರೇಮಿಗಳು ಸಸಿಗಳನ್ನು ನೆಟ್ಟರು.

ಇದನ್ನೂ ಓದಿ: Monsoon Forecast 2023 : ಹವಾಮಾನ ಇಲಾಖೆ VS ಸ್ಕೈಮೆಟ್; ಹೇಗಿರಲಿದೆ ಈ ಬಾರಿಯ ಮುಂಗಾರು ಮಳೆ?

ಕಾರ್ಯಕ್ರಮದಲ್ಲಿ ಮುಖಂಡರಾದ ಬಂದಪ್ಪ ಅರಳಿ, ಬನಶಂಕರ ಸಾಹುಕಾರ, ಸಿಎಂ ಶಿವಶರಣಪ್ಪ, ಶರಣು ಇಡ್ಲುರು, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸುರೇಶ ಶೆಟ್ಟಿ, ಆರೋಗ್ಯ ನಿರೀಕ್ಷಕರಾದ ಶರಣಮ್ಮ, ಸಿದ್ದಾರ್ಥ, ಮಹ್ಮದ್ ಸಲೀಂ, ವಿಶ್ವರಾಧ್ಯ ಗುತ್ತೇದಾರ, ಜ್ಞಾನೇಶ್ವರಿ ನಾಟೇಕಾರ್, ಮಲ್ಲಿಕಾರ್ಜುನ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version