ಯಾದಗಿರಿ: ಮೀನುಗಾರರು (Fishermen) ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ (Education) ಕೊಡಿಸಿ ವಿದ್ಯಾವಂತರಾಗಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹೇಳಿದರು.
ನಗರದ ಹೈಟೆಕ್ ಮೀನು ಮಾರಾಟ ಮಳಿಗೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ.
ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಸರ್ಕಾರ ಸಾಕಷ್ಟು ಸವಲತ್ತು ಕೊಡುತ್ತಿದೆ. ಇವುಗಳನ್ನು ಪಡೆದುಕೊಂಡು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಇದನ್ನೂ ಓದಿ: IND vs WI: ಭಾರತ-ವಿಂಡೀಸ್ ಟೆಸ್ಟ್ ಇತಿಹಾಸವೇ ಬಲು ರೋಚಕ
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜಣ್ಣ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆಯುವುದರ ಜತೆಗೆ ನಮ್ಮ ಇಲಾಖೆಯಲ್ಲಿ ಮೀನುಗಾರರಿಗೆ ಗುಂಪು ವಿಮೆ ಸೌಲಭ್ಯ ಇದ್ದು, ಇದನ್ನು ಪ್ರತಿಯೊಬ್ಬರು ಕಡ್ಡಯವಾಗಿ ಪಡೆಯಬೇಕು ಎಂದು ಸಲಹೆ ನೀಡಿದರು.
ಜೀವ ವಿಮೆಗೆ ನಾವೆಲ್ಲರೂ ಹಣ ಕೊಟ್ಟು ಮಾಡಿಕೊಳ್ಳಬೇಕು ಆದರೆ ಮೀನು ಕೃಷಿಕರಿಗೆ ಸರ್ಕಾರವೇ ಉಚಿತವಾಗಿ ಮಾಡಿಕೊಡುತ್ತಿದೆ, ಇಂತಹ ಸವಲತ್ತನ್ನು ನೀವು ಪ್ರತಿಯೊಬ್ಬರು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Internal Marks : ಪಿಯುಸಿಯಲ್ಲಿ ಇನ್ನು ಸೈನ್ಸ್ ಮಾತ್ರ ಅಲ್ಲ ಎಲ್ಲ ವಿಷಯಗಳಿಗೂ Internal Marks
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಶಹಾಪುರ ಸಹಾಯಕ ನಿರ್ದೇಶಕ ಉಮೇಶ ಎಂ. ಬೋವಿ, ಯಾದಗಿರಿ ಸಹಾಯಕ ನಿರ್ದೇಶಕ ವೆಂಕಟೇಶ, ಸಂತೋಷ ಎಸ್.ಕೆ., ಸುರಪುರ ಮೀನುಗಾರರ ಸಂಘ ಅಧ್ಯಕ್ಷ ಶಿವರಾಮ್, ತಾಯಪ್ಪ, ಸಾಬಣ್ಣ, ದುರ್ಗಪ್ಪ, ಮಲ್ಲಿಕಾರ್ಜುನ, ರಾಜಪ್ಪ, ಸಿದ್ದಪ್ಪ ಸೇರಿದಂತೆ ಅನೇಕ ಮೀನುಗಾರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 100 ರೂ. ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ
ಪ್ರಾಸ್ತಾವಿಕವಾಗಿ ಶರಣಪ್ಪ ಹದನೂರು ಮಾತನಾಡಿದರು. ಮೀನುಗಾರರ ಸಂಘದ ಅಧ್ಯಕ್ಷ ನಿಂಗಪ್ಪ ಜಾಲಗಾರ ಸ್ವಾಗತಿಸಿದರು. ಹಳ್ಳೆಪ್ಪ ಯರಗೋಳ ನಿರೂಪಿಸಿದರು. ದುರ್ಗಪ್ಪ ಶೇಗುರಕರ್ ವಂದಿಸಿದರು.