Site icon Vistara News

Yadgiri News: ನೂತನ ಸೇತುವೆ ನಿರ್ಮಾಣಕ್ಕೆ ಬೆಳಗೇರಾ ಗ್ರಾಮಸ್ಥರ ಆಗ್ರಹ

construction of new bridge Belgera villagers demand at Yadgiri

ಯಾದಗಿರಿ: ಸರ್ಕಾರವು ಶಿಥಿಲಗೊಂಡ ಸೇತುವೆ ತೆರವು ಮಾಡಿ, ನೂತನ ಸೇತುವೆ (New bridge) ನಿರ್ಮಾಣ ಮಾಡಬೇಕು ಇಲ್ಲದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯನ್ನು (MP Election) ಬಹಿಷ್ಕಾರ ಮಾಡುವುದಾಗಿ ಬೆಳಗೇರಾ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಯಾದಗಿರಿ ತಾಲೂಕಿನ ಮುಂಡರಗಿ – ಬೆಳಗೇರಾದ ಸಂಪರ್ಕದ ಸೇತುವೆ ಕಳೆದ ಎರಡು ವರ್ಷದ ಹಿಂದೆ ಹಾಳಾಗಿದ್ದು, ಸೇತುವೆ ಭಾಗ ಕುಸಿದಿದೆ, ಇದರಿಂದಾಗಿ ಗ್ರಾಮಕ್ಕೆ ತೆರಳಲು ಜನರು ಪರದಾಡುವಂತಾಗಿದೆ.

ಬೆಳಗೇರಾದಿಂದ ಯಾದಗಿರಿ ಜಿಲ್ಲಾ ಕೇಂದ್ರ ಹಾಗೂ ವಿವಿಧ ಗ್ರಾಮಗಳಿಗೆ ತೆರಳಲು ಗ್ರಾಮಸ್ಥರು ಪರದಾಡುವಂತಾಗಿದೆ. ಶಾಲೆ ಮಕ್ಕಳು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ: Ambati Rayudu: ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಆಡಲು ಸಜ್ಜಾದ ಅಂಬಾಟಿ ರಾಯುಡು

ಸೇತುವೆ ಹಾಳಾದ ಹಿನ್ನಲೆ ಸೇತುವೆ ಪಕ್ಕದಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿದೆ, ಜನರು ಈ ಮಣ್ಣಿನ ರಸ್ತೆ ಮೂಲಕ ಸಂಚಾರ ಮಾಡುತ್ತಾರೆ. ಆದರೆ ಮಳೆ ಬಂದಾಗ ಈ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡು ರಸ್ತೆಯು ಸಂಪೂರ್ಣವಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಕೆಸರು ರಸ್ತೆಯಲ್ಲಿ ಜನರು ಊರಿಗೆ ತೆರಳಬೇಕೆಂದರೆ ಸಾಧ್ಯವಾಗುತ್ತಿಲ್ಲ. ವಾಹನಗಳು ಕೆಟ್ಟು ಹೋದರೆ ತಳ್ಳಿಕೊಂಡು ವಾಹನಗಳನ್ನು ತೆಗೆದುಕೊಂಡು ಹೋಗುವಂತಾಗಿದೆ.

ಈ ಬಗ್ಗೆ ಸಾಕಷ್ಟು ಬಾರಿ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾರು ಸೇತುವೆ ನಿರ್ಮಾಣ ಮಾಡುವ ಕಾಳಜಿ ತೊರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಭತ್ತ ನಾಟಿ ವಿನೂತನ ಪ್ರತಿಭಟನೆ

ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣ ಮಾಡಿದ್ದು ಮಳೆ ನೀರು ಸಂಗ್ರಹಗೊಂಡು ರಸ್ತೆ ಸಂಪೂರ್ಣ ಕೇಸರು ಗದ್ದೆಯಾಗಿದೆ, ಹೀಗಾಗಿ ಗ್ರಾಮಸ್ಥರು, ಸಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ನೇತೃತ್ವದಲ್ಲಿ ಭತ್ತ ನಾಟಿ ಮಾಡಿ ಪ್ರತಿಭಟನೆ ಮೂಲಕ ಅಧಿಕಾರಿಗಳಿಗೆ ಚಾಟಿ ಬಿಸಿದ್ದಾರೆ.

ಈ ಬಗ್ಗೆ ಸಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಮಾತನಾಡಿ, ಸೇತುವೆ ಹಾಳಾಗಿದ್ದು ಇದರಿಂದ ರಸ್ತೆ ಅಪಘಾತ ಘಟನೆಗಳು ಜರುಗುತ್ತಿವೆ. ಅಧಿಕಾರಿಗಳು ತಡೆ ಗೊಡೆ ಸಹಿತ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಬೇಕು, ಒಂದು ಸೇತುವೆ ನಿರ್ಮಾಣ ಮಾಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Viral News : ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆಗಳು; ಕಾಲುವೆಗೆ ಹಾರಿ ರಕ್ಷಣೆ

ಈ ವೇಳೆ ಗ್ರಾಮಸ್ಥರಾದ ಆಂಜನೇಯ ನಾಯ್ಕೋಡಿ, ಚಂದ್ರಯ್ಯ ಗುತ್ತೆದಾರ, ಸೋಮನಗೌಡ ,ಸಾಬಣ್ಣ ಪ್ಯಾಟಿ, ಅಯ್ಯಪ್ಪ, ಮಹಾದೇವಪ್ಪ, ಲೊಕೇಶ, ಜಗದೇವ, ಮೋನಪ್ಪ, ಮುತ್ತಮ್ಮ, ಹಳ್ಳೆಮ್ಮ, ಬಸವಲಿಂಗಮ್ಮ ಸೇರಿದಂತೆ ಅನೇಕರು ಇದ್ದರು

Exit mobile version