ಯಾದಗಿರಿ: ತಾಲೂಕಿನ ಹತ್ತಿಕುಣಿ ಭಾಗದ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯ (Hathikuni reservoir) ಭರ್ತಿಯಾಗಿದ್ದು, ರೈತರಲ್ಲಿ (Farmers) ಸಂತಸ (Happy) ಮೂಡಿಸಿದೆ.
ಜೂನ್ ತಿಂಗಳ ಆರಂಭದಲ್ಲಿ ಮುಂಗಾರು ಮಳೆ ಸುರಿಯಲಿಲ್ಲ, ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿ ರೈತರಲ್ಲಿ ಆತಂಕ ಮೂಡಿತ್ತು. ರೈತರು ಬಿತ್ತನೆ ಮಾಡಿದ ಮುಂಗಾರು ಹೆಸರು, ಹತ್ತಿ ಇನ್ನಿತರೆ ಬೆಳೆಗಳು ಸರಿಯಾಗಿ ನಾಟಿಯಾಗದೇ ನಷ್ಟ ಅನುಭವಿಸಿದರು, ಆದರೆ ಜುಲೈ ತಿಂಗಳಲ್ಲಿ ಸುರಿದ ನಿರಂತರ ಮಳೆಗೆ ಜಲಾಶಯ ಭರ್ತಿಯಾಗಿದೆ.
ಜಲಾಶಯ ಒಟ್ಟು 30 ಅಡಿ ಎತ್ತರವಿದ್ದು, 0.352 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ, ಜಲಾಶಯದ ನೀರನ್ನೇ ಅವಲಂಬಿಸಿ, ಹತ್ತಿಕುಣಿ, ಹೊನಗೇರಾ, ಕಟಗಿ ಶಹಾಪುರ, ದಸರಾಬಾದ್, ಯಡ್ಡಳ್ಳಿ ಗ್ರಾಮಗಳ ರೈತರ ಅಂದಾಜು 4185 ಹೆಕ್ಟೇರ್ ಅಚ್ಚುಕಟ್ಟು ನೀರಾವರಿ ಪ್ರದೇಶವಿದೆ.
ಇದನ್ನೂ ಓದಿ: Arecanut Price : ಭೂತಾನ್‌ನಿಂದ 17 ಸಾವಿರ ಟನ್ ಅಡಿಕೆ ಆಮದು; ಬೆಲೆಗೆ ಪೆಟ್ಟು, ಬೆಳೆಗಾರರಿಗೆ ಇಕ್ಕಟ್ಟು
ಹಸಿರು ಬೆಟ್ಟಗಳ ಮಧ್ಯೆ ಇರುವ ಜಲಾಶಯಕ್ಕೆ ಹೆಚ್ಚುವರಿಯಾಗಿ ಹರಿದು ಬರುತ್ತಿರುವ ನೀರನ್ನು ಗೇಟ್‌ಗಳ ಮೂಲಕ ಹಳ್ಳಕ್ಕೆ ಹೊರಬಿಡಲಾಗುತ್ತಿದೆ.
ಜಲಾಶಯ ಭರ್ತಿಯಾಗಿರುವ ಸುದ್ದಿ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಲಾಶಯಕ್ಕೆ ಭೇಟಿ ನೀಡಿ, ಅಲ್ಲಿರುವ ನಿಸರ್ಗ ಸೌಂದರ್ಯವನ್ನು ವೀಕ್ಷಿಸಿ, ಕೆಲ ಸಮಯ ಕಳೆದು ಸಂತಸದಿಂದ ತೆರಳುತ್ತಿದ್ದಾರೆ.
ಇದನ್ನೂ ಓದಿ: Pro Kabaddi: ಮತ್ತೆ ಬೆಂಗಳೂರು ಬುಲ್ಸ್ ಸೇರಲಿದ್ದಾರೆ ಪವನ್ ಸೆಹ್ರಾವತ್!
ಕರ್ನಾಟಕ ನೀರಾವರಿ ನಿಗಮದ ಹತ್ತಿಕುಣಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ್ ಎಸ್. ಕಳಸ್ಕರ್ ಈ ಬಗ್ಗೆ ಮಾತನಾಡಿ, ಜಲಾಶಯದ ನೀರಿನ ಮಟ್ಟ ಗಮನಿಸಿ, ಹೆಚ್ಚುವರಿ ನೀರು ಹಳ್ಳಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಹಳ್ಳದ ತೀರಕ್ಕೆ ತೆರಳದೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.