ಯಾದಗಿರಿ: ಅಕ್ರಮವಾಗಿ ಕಾರ್‌ನಲ್ಲಿ 150 ಕೆ.ಜಿ ಶ್ರೀಗಂಧ ಕಟ್ಟಿಗೆ (sandal wood) ಸಾಗಾಟ (Illegal Transport) ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿರುವ ಘಟನೆ ಜರುಗಿದೆ.
ಯಾದಗಿರಿ ತಾಲೂಕಿನ ಬಗ್ಗಲಮಡು-ಹಂದಿರಕಿ ರಸ್ತೆ ಭಾಗದಲ್ಲಿ ಕಾರಿನಲ್ಲಿ ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಚರಣೆ ನಡೆಸಿ, ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ಆರೋಪಿ ಸಚಿನ್‌ನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪಾಂಡುರಂಗ ಎಂಬುವವನು ಪರಾರಿಯಾಗಿದ್ದಾನೆ.
ಈ ಬಗ್ಗೆ ಪ್ರಾದೇಶಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ ಮಾತನಾಡಿ, ಕಾರಿನಲ್ಲಿ ಅಕ್ರಮವಾಗಿ ಶ್ರೀಗಂಧ ಕಟ್ಟಿಗೆ ಸಾಗಾಟ ಮಾಡುತ್ತಿರುವ ಮಾಹಿತಿ ಮೆರೆಗೆ ನಮ್ಮ ಅಧಿಕಾರಿಗಳು ದಾಳಿ ನಡೆಸಿ, 150 ಕೆಜಿ ಶ್ರೀಗಂಧ ಕಟ್ಟಿಗೆ ಸಹಿತ ಆರೋಪಿ ಸಚೀನ್ ನನ್ನು ಬಂಧಿಸಲಾಗಿದ್ದು, ಬಂಧಿತನಿಂದ ಕಾರ್, ಒಂದು ಬೈಕ್ ಹಾಗೂ ಎರಡು ಕೊಡಲಿ ಜಪ್ತಿ ಮಾಡಲಾಗಿದೆ, ಈ ಕುರಿತು ಅರಣ್ಯ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Libya flood: ಲಿಬಿಯಾದಲ್ಲಿ ಚಂಡಮಾರುತ, ಪ್ರವಾಹ; 20,000ಕ್ಕೂ ಅಧಿಕ ಮಂದಿ ಸಾವು
ಯಾದಗಿರಿ ಡಿಎಫ್ಒ ಕಾಜೋಲ್ ಪಾಟೀಲ, ಎಸಿಎಫ್ ಸುನೀಲ್ ಜಿ. ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಜಯವರ್ಧನ ತಳವಾರ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.