ಯಾದಗಿರಿ: ವಿದ್ಯಾರ್ಥಿಗಳು (Students) ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಮನಸ್ಸು ಕ್ರಿಯಾಶೀಲತೆಯಿಂದ ಕೂಡಿದರೆ ಸಾಧನೆ (Achievement) ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಯಾದಗಿರಿ ನಗರದ ಸ್ಟೇಷನ್ ಬಜಾರ್ ಹಾಗೂ ನ್ಯೂ ಕನ್ನಡ ಪ್ರೌಢ ಶಾಲೆಯ ಮಕ್ಕಳೊಂದಿಗೆ ಹೆಜ್ಜೆಗೊಂದು ದಾರಿ, ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿಗಳ ಸ್ಪೂರ್ತಿ ಸಂವಾದ ಎಂಬ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಉಡಾವಣೆ ಯಶಸ್ವಿ; ಆದರೂ, ಆಗಸ್ಟ್ 23ರವರೆಗೆ ನಾವೇಕೆ ಕಾಯಬೇಕು?
ಎಸ್ಎಸ್ಎಲ್‌ಸಿ ಪರೀಕ್ಷೆ ಎಂಬುದು ಜೀವನದ ಪ್ರಮುಖ ಘಟ್ಟ, ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದುಕೊಳ್ಳಬೇಕು ಎಂಬುದು ಎಲ್ಲರೂ ಪ್ರಯತ್ನಪಡುತ್ತಾರೆ, ಉದ್ದೇಶವೂ ಆಗಿರುತ್ತದೆ. ಆದರೆ, ಫಲಿತಾಂಶ ಏನೇ ಆದರೂ ವಿದ್ಯಾರ್ಥಿಗಳು ಋುಣಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದರು.
ಗುಣಾತ್ಮಕ ಶಿಕ್ಷಣಕ್ಕೆ ಇಂದು ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ. ಹೆಚ್ಚು ಅಂಕ ಪಡೆಯಲು ಹೆಚ್ಚು ಓದುವ ಸಂಕಲ್ಪ ಇರಬೇಕು. ಸಮಸ್ಯೆಗಳ ಮಧ್ಯೆಯೇ ಬೆಳೆದು ನಿಲ್ಲುವ ಛಲವಿರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Koppala News: ನವಲಿ ಗ್ರಾಮದ ಕೆರೆ ಪುನಶ್ಚೇತನಗೊಳಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಸರಿಯಾಗಿ ಅಧ್ಯಯನ ಕೈಗೊಂಡಲ್ಲಿ ಅಂಕಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಸತತ ಪರಿಶ್ರಮಕ್ಕೆ ಪ್ರತಿಫಲ ಖಚಿತ ಎಂದರು.
ಸರ್ಕಾರಿ ಕರ್ತವ್ಯದ ಬಗ್ಗೆ ಸೂಕ್ತ ಮಾಹಿತಿ ಪಡೆದ ವಿದ್ಯಾರ್ಥಿಗಳು ತಮ್ಮ ಪರಿಚಯ ಜತೆಗೆ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪರಿಚಯ ಮಾಡಿಕೊಂಡು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ ನೀಡಿದರು.
ಜಿಲ್ಲಾಧಿಕಾರಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನಿಯನ್ನು ನೀಡಿ ಉತ್ತಮ ಭವಿಷ್ಯಕ್ಕೆ ಅಭಿನಂದಿಸಿದರು.
ಇದನ್ನೂ ಓದಿ: Chandrayaan 3: ದೇಶದ ಕನಸು ಆಗಸಕ್ಕೆ; ಫ್ರಾನ್ಸ್ನಿಂದಲೇ ಚಂದ್ರಯಾನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಹಣಮಂತ ಎಚ್, ಶಿಕ್ಷಕಿಯಾದ ವರಲಕ್ಷ್ಮೀ, ಶಿಕ್ಷಕ ವಿನೋದ ರೆಡ್ಡಿ ಉಪಸ್ಥಿತರಿದ್ದರು.