ಯಾದಗಿರಿ: ಅಂತರ್ ಜಿಲ್ಲಾ (Inter district) ಇಬ್ಬರು ಬೈಕ್ ಕಳ್ಳರನ್ನು (Bike thieves) ಬಂಧಿಸಿ, ಅವರಿಂದ 20 ಬೈಕ್ ಮತ್ತು ಒಂದು ಕಾರನ್ನು (Car) ಕೆಂಭಾವಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಆರೋಪಿಗಳಾದ ದೇವರಾಜ ಹಾಗೂ ಶಶಿಕುಮಾರ್ ಅವರನ್ನು ಕೆಂಭಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 28 ಲಕ್ಷ 50 ಸಾವಿರ ರೂ ಮೌಲ್ಯದ 20 ಬೈಕ್ಗಳು ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: IND vs WI: ದಿಗ್ಗಜ ಸರ್ ಗ್ಯಾರಿ ಸೋಬರ್ಸ್ ಭೇಟಿಯಾದ ಟೀಮ್ ಇಂಡಿಯಾ ಆಟಗಾರರು
ಕಳೆದ ಮೇ ತಿಂಗಳಲ್ಲಿ ಕೆಂಭಾವಿ ಪಟ್ಟಣದಲ್ಲಿ ಬೈಕ್ವೊಂದು ಕಳ್ಳತನವಾಗಿತ್ತು ಈ ಬಗ್ಗೆ ತನಿಖೆ ಕೈಗೊಂಡಿದ್ದ ಕೆಂಭಾವಿ ಠಾಣೆಯ ಪೊಲೀಸರು, ಒಂದು ಬೈಕ್ ಮತ್ತು ಕಾರನ್ನು ತೆಗೆದುಕೊಂಡು ಸಂಶಯಾಸ್ಪದವಾಗಿ ನಿಂತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಬಸವನಬಾಗೇವಾಡಿ, ಲಿಂಗಸೂಗೂರ, ತಾಳಿಕೋಟೆ, ಮುದ್ದೆಬಿಹಾಳ, ನಿಡಗುಂದಿ, ಮಸ್ಕಿ, ಯಾದಗಿರಿ ನಗರ ಹಾಗೂ ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಇಬ್ಬರು ಆರೋಪಿಗಳು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Komal Kumar: ಕೋಮಲ್ ಅಭಿನಯದ ‘ರೋಲೆಕ್ಸ್’ ಸಿನಿಮಾದ ಸ್ಪೆಷಲ್ ಪೋಸ್ಟರ್ ಔಟ್!
ಯಾದಗಿರಿ ಜಿಲ್ಲೆಯ ನಿವಾಸಿಗಳಾದ ಇಬ್ಬರು ಆರೋಪಿಗಳಿಂದ 28 ಲಕ್ಷ 50 ಸಾವಿರ ರೂ ಮೌಲ್ಯದ 20 ಬೈಕ್ಗಳು ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಕೆಂಭಾವಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.