ಯಾದಗಿರಿ: ದಿನನಿತ್ಯವೂ ಯೋಗ (Yoga) ಮಾಡುವದರಿಂದ ರೋಗ ಮುಕ್ತವಾಗಿ ಆರೋಗ್ಯವಾಗಿ (Healthy) ಇರಬಹುದಾಗಿದೆ, ಪ್ರತಿಯೊಬ್ಬರೂ ಯೋಗದ ಮಹತ್ವ ಅರಿತುಕೊಂಡು ಯೋಗವನ್ನು ಮಾಡಬೇಕು ಎಂದು ಶಾಂತಿಸದನ ಶಾಲೆಯ ಅಧ್ಯಕ್ಷ ಸಾಹೇಬರೆಡ್ಡಿ ಬಕ್ಕಾ ತಿಳಿಸಿದರು.
ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಯಾದಗಿರಿಯ ಶಾಂತಿ ಸದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ , ಯೋಗದ ಮೂಲಕ ಸಕಾರಾತ್ಮಕ ಭಾವನೆ ಬರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 280 ರೂ. ಇಳಿಕೆ, ಬೆಳ್ಳಿ 250 ರೂ. ಅಗ್ಗ
ನಂತರ ಶಿಕ್ಷಕಿ ರಾಜೇಶ್ವರಿ ಮಾತನಾಡಿ, ಯೋಗದಿಂದ ಮನಸ್ಸು ಶಾಂತವಾಗಿ ಏಕಾಗ್ರತೆ ಹೆಚ್ಚಲಿದೆ. ಯೋಗದಿಂದ ರೋಗ ಮುಕ್ತವಾಗಲಿದೆ. ಯಾಂತ್ರಿಕ ಜೀವನದಲ್ಲಿ ಒತ್ತಡದ ನಡುವೆ ಕೆಲಸ ಮಾಡುವುದರಿಂದ ಮಾನಸಿಕ ಒತ್ತಡದಿಂದ ಅನಾರೋಗ್ಯ ತಲೆದೋರಲಿದೆ. ಕಾರಣ ಯೋಗದ ಮಹತ್ವ ಅರಿತು ಯೋಗ ಮಾಡಬೇಕು ಎಂದು ಹೇಳಿದರು.
ಬಳಿಕ ಯೋಗ ಶಿಕ್ಷಕಿ ಮಂಜುಳಾ ಪಾಟೀಲ ಮಾತನಾಡಿ, ಸಮಾಜಿಕ ಕಾಳಜಿಯಿಟ್ಟುಕೊಂಡು ವಿಸ್ತಾರ ನ್ಯೂಸ್ ಅನೇಕ ಜನಪರ ಸಮಸ್ಯೆಗಳನ್ನು ಬೆಳಕಿಗೆ ತಂದು ಜನರಿಗೆ ಧ್ವನಿಯಾಗಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದೆ. ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಯೋಗ ದಿನ ಆಚರಣೆ ಮಾಡಲಾಗಿದೆ. ಯೋಗದಿಂದ ಆರೋಗ್ಯದ ಜತೆ ಜ್ಞಾನ ಹೆಚ್ಚಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಸಂತೋಷ್ ದಾಸ್, ವಿಶ್ವಾರಾಧ್ಯ ಗುತ್ತೆದಾರ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: Brand Bengaluru: ವಿದ್ಯುತ್ ಜತೆಗೆ ಕಸದ ಶುಲ್ಕವೂ ಸೇರ್ಪಡೆಗೆ ಸಲಹೆ: ಖಚಿತಪಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್
ಈ ವೇಳೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯೋಗ ಮಾಡಿದರು.