ಯಾದಗಿರಿ: ಕಳೆದ ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ್ದ ಅತಿವೃಷ್ಠಿಯಿಂದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೊಂದೆನೂರ ಗ್ರಾಮದಲ್ಲಿ ಎತ್ತಿನ ಬಂಡಿ ಪಲ್ಟಿಯಾಗಿ ಮೃತಪಟ್ಟಿದ್ದ ರೈತ ವೆಂಕಟೇಶ್‌ನ ಪತ್ನಿ ಮಹಾದೇವಮ್ಮ ಅವರಿಗೆ ಸರ್ಕಾರದಿಂದ ಮಂಜೂರಾದ 2 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಯಾದಗಿರಿ ನಗರದ ತಮ್ಮ ನಿವಾಸದಲ್ಲಿ ವಿತರಿಸಿದರು.
ಕೃಷ್ಣಾ ನದಿ ಪ್ರವಾಹ ನೀರು ಗ್ರಾಮಕ್ಕೆ ನುಗ್ಗಿದ ಸಂದರ್ಭದಲ್ಲಿ ತನ್ನ ಎತ್ತಿನ ಬಂಡಿಯಲ್ಲಿ ಕುಟುಂಬದ ವಸ್ತುಗಳನ್ನು ಸಾಗಿಸುತ್ತಿರುವ ವೇಳೆ ಎತ್ತಿನ ಬಂಡಿ ಪಲ್ಟಿಯಾಗಿ ರೈತ ವೆಂಕಟೇಶ ಮೃತಪಟ್ಟಿದ್ದರು,
ಚೆಕ್ ವಿತರಿಸಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಮೃತ ರೈತ ವೆಂಕಟೇಶ್ ಅವರಿಗೆ ಚಿಕ್ಕ ವಯಸ್ಸಿನ ಮಕ್ಕಳಿದ್ದಾರೆ. ಈ ಹಣವನ್ನು ಅವರ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: Team India : ಬಿಸಿಸಿಐ ಹೊಸ ನಿಯಮದ ಉರುಳು; ವಿದೇಶಿ ಲೀಗ್ನಿಂದ ಅಂಬಾಟಿ ಎಸ್ಕೇಪ್!
ಈ ಸಂದರ್ಭದಲ್ಲಿ ವಡಗೇರಾ ಉಪ ತಹಸೀಲ್ದಾರ್ ಸಂಗಮೇಶ, ಜಿ.ಪಂ. ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಪಾಟೀಲ ಚೆನ್ನೂರ, ಸಾಹೇಬಗೌಡ ಅನಕಸೂಗೂರು, ಅಶೋಕರೆಡ್ಡಿ ಕುರಿಹಾಳ, ಚೆನ್ನಪ್ಪಗೌಡ ನಾಯ್ಕಲ್, ಶಾಂತಪ್ಪ ಗೊಂದೆನೂರ, ದೊಡ್ಡಪ್ಪ ಪೂಜಾರಿ, ಅಮೀನರೆಡ್ಡಿ ಕೊಂಕಲ, ಶರಣಬಸವ ಕುರಕುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.