ಯಾದಗಿರಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಹರ್ ಘರ್ ತಿರಂಗಾ ಅಭಿಯಾನಕ್ಕೆ (Har Ghar Tiranga campaign) ಚಾಲನೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ದಿನೋತ್ಸವದ ಮಹತ್ವ ಸಾರುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಮೂರು ದಿನಗಳ ಕಾಲ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಲಾಗುತ್ತಿದೆ, ಅದರಂತೆ ವಡಗೇರಾ ಪಟ್ಟಣದ ಮನೆ ಮೇಲೆ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ರಾಷ್ಟ್ರಧ್ವಜ ಹಾರಿಸಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: Independence Day 2023: ಸ್ವಾತಂತ್ರ್ಯೋತ್ಸವ ದಿನ ನೋಡಲೇಬೇಕಾದ ಕನ್ನಡ ಚಿತ್ರಗಳಿವು
ಬಳಿಕ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಸರ್ಕಾರದ ಸೂಚನೆಯಂತೆ ರಾಷ್ಟ್ರದಾದ್ಯಂತ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಅಭಿಯಾನ ನಡೆಸಲಾಗುತ್ತಿದೆ. ಅಗಸ್ಟ್ 13 ರಿಂದ ಅಗಸ್ಟ್ 15 ರ ವರಗೆ ಈ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ದೇಶದ ಜನರಿಗೆ ಸ್ವಾತಂತ್ರ್ಯದ ಮಹತ್ವ ಸಾರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ದೇಶಾದ್ಯಂತ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಇದೇ ವೇಳೆ ವಡಗೇರಾ ಪಟ್ಟಣದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆ ನಡೆಸಿದರು. ಈ ವೇಳೆ ಮೆರವಣಿಗೆಯಲ್ಲಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಭಾಗಿಯಾದರು.
ಇದನ್ನೂ ಓದಿ: Mobile Addiction : ಮಕ್ಕಳಿಗಿನ್ನು ಮೊಬೈಲ್ ಮುಟ್ಟಿದರೆ ಮುನಿ; ಇದು ಹೊಸ APP ಕಹಾನಿ!
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಸಿದ್ದಣ್ಣಗೌಡ ಕಾಡಂನೋರ್, ಬಸವರಾಜ ಸೊನ್ನದ,ಪರಶುರಾಮ ಕುರಕುಂದಿ,ಗೌರಿಶಂಕರ ಹಿರೇಮಠ, ಸೂಗುರೆಡ್ಡಿ ಪೊಲೀಸ್ ಪಾಟೀಲ, ಶಿವಕುಮಾರ್ ಕೊಂಕಲ್,ಶ್ರೀನಿವಾಸ ಕುಲಕರ್ಣಿ, ರಾಜಶೇಖರ ಕಾಡಂನೋರ್, ಸಿದ್ದಪ್ಪ ತಮ್ಮಣ್ಣನವರ್, ಚನ್ನಪ್ಪ ನಾಯಕ, ಸುದರ್ಶನ ನೀಲಹಳ್ಳಿ, ಸಂತೋಷ,ವಿಶ್ವನಾಥರೆಡ್ಡಿ ಸೇರಿದಂತೆ ಅನೇಕರು ಇದ್ದರು.