ಯಾದಗಿರಿ: ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹಾರದಿಂದ ಅಬ್ಬೆತುಮಕೂರಿಗೆ ಪ್ರತಿವರ್ಷದ ಪದ್ದತಿಯಂತೆ ಕಳೆದ ಮೂರು ದಿನಗಳಿಂದ ಶ್ರೀಮಠದ ಪೀಠಾಧಿಪತಿ ಡಾ.ಗಂಗಾಧರ ಶ್ರೀಗಳ (Dr. Gangadhar Sri) ನೇತೃತ್ವದಲ್ಲಿ ಲಕ್ಷಾಂತರ ಭಕ್ತ ಸಾಗರ ನಡುವೆ ನಡೆಯುತ್ತಿರುವ ಪರಂಪರಾ ಪಾದಯಾತ್ರೆ ಅಬ್ಬೆತುಮಕೂರ ಪಾದಗಟ್ಟೆ (Abbetumkur paadagatte) ತಲುಪಿತು.
3 ನೇ ದಿನದ ಪಾದಯಾತ್ರೆ ಅಮಾವಾಸ್ಯೆಯ ವಿಶೇಷ ಪೂಜಾ ವಿಧಾನಗಳನ್ನು ಪಲ್ಲಕ್ಕಿ ಮೂರ್ತಿ ಗಂಗಾಸ್ನಾನ ನೆರವೇರಿಸಿಕೊಂಡು ತರುವಾಯ ಹೊತ್‌ಪೇಟೆ ಮಲ್ಲರೆಡ್ಡಿಗೌಡ, ಶಹಾಪೂರದ ಮರೆಪ್ಪ ಹೈಯ್ಯಾಳಕರ್ ಏರ್ಪಡಿಸಿದ್ದ ಪ್ರಸಾದವನ್ನು ಸ್ವೀಕರಿಸಿ ಪಾದಯಾತ್ರೆಯು ಠಾಣಗುಂದಿಯನ್ನು ತಲುಪಿತು.
ಇದನ್ನೂ ಓದಿ: Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ
ಠಾಣಗುಂದಿ ಗ್ರಾಮದಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಪ್ರಸಾದ ಸ್ವೀಕರಿಸಿ ಸಂಜೆ ಅಬ್ಬೆತುಮಕೂರು ಶ್ರೀ ವಿಶ್ವಾರಾಧ್ಯರ ಪಾದಗಟ್ಟೆ ತಲುಪಿತು. ಅಲ್ಲಿ ಅಲ್ಲಿಪೂರ ಗ್ರಾಮದ ಹಾಗೂ ವಿವಿಧ ಭಕ್ತರಿಂದ ಪ್ರಸಾದ ಫಲಹಾರದ ವ್ಯವಸ್ಥೆ ಜರುಗಿತು.
ವಿವಿಧ ಕಲಾತಂಡಗಳೊಂದಿಗೆ ಶ್ರೀಗಳಿಗೆ ಭವ್ಯ ಮೆರವಣಿಗೆ ನಡೆಸಲಾಯಿತು .ಪಾದಗಟ್ಟೆ ತಲುಪುತ್ತಿದ್ದಂತೆ ಭಕ್ತರು ಶ್ರೀಗಳ ಮೇಲೆ ಪುಷ್ಪ ಮಳೆಗೈದರು. ಸಂಜೆ 6 ಗಂಟೆಗೆ ಸಮಸ್ತ ಭಕ್ತರು ನಾಡಿನ ವಿವಿಧ ಮಠಾಧೀಶರು, ಮಾಜಿ ಶಾಸಕರಾದ ದೊಡ್ಡಪ್ಪ ಪಾಟೀಲ, ಡಾ. ವೀರಬಸವಂತರೆಡ್ಡಿ ಸೇರಿದಂತೆ ರಾಜಕೀಯ ಮುಖಂಡರು, ಸಾಹಿತಿ, ಕಲಾವಿದರು ಪಾದಯಾತ್ರೆಯನ್ನು ಭಕ್ತಿ, ಸಡಗರದಿಂದ ಬರಮಾಡಿಕೊಂಡು ಪಾದಗಟ್ಟೆಯಿಂದ ಶ್ರೀ ವಿಶ್ವಾರಾಧ್ಯರ ದೇವಸ್ಥಾನದವರೆಗೆ ವಿಶೇಷ ಮೆರವಣಿಗೆಯಲ್ಲಿ ಕರೆದೊಯ್ದರು.
ಇದನ್ನೂ ಓದಿ: Cabinet Meeting: ವಿಶ್ವಕರ್ಮ ಯೋಜನೆಗೆ ಒಪ್ಪಿಗೆ, ಕುಶಲಕರ್ಮಿಗಳಿಗೆ 2 ಲಕ್ಷ ರೂ. ಸಾಲ; ಬಡ್ಡಿ ಎಷ್ಟು?
ಕರ್ನಾಟಕ, ತೆಲಂಗಾಣ, ಆಂದ್ರ, ಮಹಾರಾಷ್ಟ್ರ ಸೇರಿದಂತೆ ಲಕ್ಷಾಂತರ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಾಂತಿ, ಸೌಹಾರ್ದತೆಯಿಂದ ನಡೆದ ಭಕ್ತಿಯ ಈ ಪಾದಯಾತ್ರೆಯನ್ನು ಎಲ್ಲರೂ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದರು. ಪಾದಯಾತ್ರೆಯ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖಾವಾರು ಆರಕ್ಷಕ ಸಿಬ್ಬಂದಿ, ಆರೋಗ್ಯ, ಜೆಸ್ಕಾಂ ಇಲಾಖೆ, ಇತರರು ಪಾದಯಾತ್ರೆ ಸಾಂಗೋಪಾಗವಾಗಿ ನೆರವೇರಲು ಸಹಕರಿಸಿದರು.
ಈ ವೇಳೆ ಡಾ.ಸುಭಾಶ್ಚಂದ್ರ ಕೌಲಗಿ, ರಮೇಶ ದೊಡ್ಡಮನಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ ಇದ್ದರು.