Site icon Vistara News

Yadagiri News: ಗುರಿಯನ್ನು ಹಿಂಬಾಲಿಸಿ ಶ್ರಮಪಟ್ಟರೆ ಸಾಧನೆ ಸಾಧ್ಯ: ಡಿಸಿ ಸ್ನೇಹಲ್

Inspirational interaction of DC with school students at Yadgiri

ಯಾದಗಿರಿ: ಮನೆಯಲ್ಲಿ ಮಗು ಅಂಬೆಗಾಲಿಟ್ಟು ನಡೆಯುವಾಗ ಎಡವುವುದು ಸಹಜ. ಆದರೆ ಆ ಮಗು ಛಲ ಬಿಡದೆ ಮತ್ತೆ ಪ್ರಯತ್ನಿಸುತ್ತಾ ನಡೆಯುವುದಕ್ಕೆ ಕಲಿಯುತ್ತದೆ. ಹಾಗೆಯೇ ನಮ್ಮ ಕನಸೆಂಬ ಗುರಿಯನ್ನು (Goal) ಹಿಂಬಾಲಿಸುತ್ತಾ ಶ್ರಮಪಟ್ಟರೆ ಸಾಧನೆ (Achieve) ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಗುರುಮಿಠಕಲ್ ತಾಲೂಕಿನ ಎಲ್ಹೇರಿ ಪ್ರೌಢಶಾಲೆ ಮತ್ತು ಯಾದಗಿರಿ ತಾಲೂಕಿನ ಆದರ್ಶ ಮಹಾವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹೆಜ್ಜೆಗೊಂದು ದಾರಿ, ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿಗಳ ಸ್ಪೂರ್ತಿ ಸಂವಾದ ಎಂಬ ವಿನೂತನ ಕಾರ್ಯಕ್ರಮ ನಡೆಸಿ ಅವರು, ಮಾತನಾಡಿದರು.

ಇದನ್ನೂ ಓದಿ: IND vs WI: ಆವೇಶ್ ಖಾನ್​ಗೆ ಗಾಯ, ವಿಂಡೀಸ್​ ಸರಣಿಗೆ ಅನುಮಾನ

ವಿದ್ಯಾರ್ಥಿಗಳು ಈ ದೇಶದ ಭವಿಷ್ಯವಾಗಿದ್ದಾರೆ. ಅವರ ಜೀವನದಲ್ಲಿ ಪ್ರಮುಖ ಘಟ್ಟ ಶಿಕ್ಷಣವಾಗಿದೆ. ಅದನ್ನು ಸಮರ್ಪಕವಾಗಿ ಪಡೆಯುವುದು ನಿಮ್ಮ ಗುರಿಯಾಗಬೇಕು ಎಂದು ತಿಳಿಸಿದರು.

ಬಾಲ್ಯದಿಂದಲೂ ಕನಸು ಇರಬೇಕು. ಕನಸು ಗುರಿಗೆ ತಕ್ಕ ಶಿಸ್ತಿನಿಂದ, ಸಮಯ ಪಾಲನೆಯಿಂದ ವಿದ್ಯಾಭ್ಯಾಸ ಮಾಡಬೇಕು. ನಿಮ್ಮ ಕಣ್ಣಮುಂದೆ ಗುರಿ ಮಾತ್ರ ಕಾಣಿಸುತ್ತಿರಬೇಕು ಎಂದರು.

ಯುಪಿಎಸ್‌ಸಿ ಪರೀಕ್ಷೆ ಎಂದರೆ ಸಮುದ್ರವಿದ್ದಂತೆ. ಕೇಂದ್ರ ಲೋಕಸೇವಾ ಆಯೋಗ ಪ್ರತಿವರ್ಷ ನಾಗರಿಕ ಸೇವೆಗಳಿಗೆ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಗೆದ್ದವರು ಐಎಎಸ್‌ ಅಧಿಕಾರಿ, ಐಪಿಎಸ್‌ ಅಧಿಕಾರಿ, ಐಎಫ್‌ಎಸ್‌ ಅಧಿಕಾರಿ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ, ಕಚೇರಿಗಳಲ್ಲಿ ಗ್ರೂಪ್‌ ಎ ಮತ್ತು ಬಿ ಅಧಿಕಾರಿಗಳಾಗಿ ಹೊರಹೊಮ್ಮುತ್ತಾರೆ. ದೇಶದ ಅತ್ಯುತ್ತಮ ಸೇವೆಗಳಾದ ಈ ಹುದ್ದೆಗಳಿಗೆ ಸೇರಬೇಕು ಎಂದರೆ ಕಠಿಣ ಶ್ರಮ ಬೇಕೇ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದನ್ನೂ ಓದಿ: Karnataka Budget 2023: ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

ವಿದ್ಯಾರ್ಥಿಗಳು ಸರ್ಕಾರಿ ಕರ್ತವ್ಯದ ಬಗ್ಗೆ ಸೂಕ್ತ ಮಾಹಿತಿ ಪಡೆದರು, ತಮ್ಮ ಪರಿಚಯದ ಜೊತೆಗೆ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪರಿಚಯ ಮಾಡಿಕೊಂಡು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಉತ್ತರ ನೀಡಿದರು.

ಜಿಲ್ಲಾಧಿಕಾರಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನಿ ನೀಡಿ ಉತ್ತಮ ಭವಿಷ್ಯಕ್ಕೆ ಅಭಿನಂದಿಸಿದರು.

ಇದನ್ನೂ ಓದಿ: Karnataka Budget 2023 : ಉನ್ನತ ಶಿಕ್ಷಣದಲ್ಲಿ ಕನ್ನಡ ಬಳಕೆ; ಪಠ್ಯ ಭಾಷಾಂತರಕ್ಕೆ ಕ್ರಮ

ಈ ಸಂದರ್ಭದಲ್ಲಿ ಎಸ್ಎಸ್ಎಲ್ ಸಿ ನೋಡಲ್ ಅಧಿಕಾರಿ ಹನುಮಂತ ಎಚ್, ಮುಖ್ಯ ಶಿಕ್ಷಕಿ ಮಂಜುಳಾ , ಶಿಕ್ಷಕಿ ನಂದಿನಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Exit mobile version