Site icon Vistara News

Yadgiri News: ಕ್ಷಯರೋಗ ಸಕ್ರಿಯ ಪ್ರಕರಣಗಳ ಪತ್ತೆ ಕಾರ್ಯ ಚುರುಕುಗೊಳಿಸಿ: ಜಿಲ್ಲಾಧಿಕಾರಿ ಸ್ನೇಹಲ್

Yadgiri DC Snehal Meeting

ಯಾದಗಿರಿ: ಜಿಲ್ಲೆಯಾದ್ಯಂತ ಕ್ಷಯರೋಗ (TB) ಸಕ್ರಿಯ ಪ್ರಕರಣಗಳ ಪತ್ತೆ (Detection) ಕಾರ್ಯ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಸ್ನೇಹಲ್.ಆರ್, ಸಂಬಂಧಿಸಿದ ಅಧಿಕಾರಿ ಹಾಗೂ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ “ಕ್ಷಯ ರೋಗ ನಿಯಂತ್ರಣ ಕುರಿತ ಕಾರ್ಯಪಡೆ ಸಭೆ” ನಡೆಸಿದ ಅವರು, ಅಪಾಯಕಾರಿ ರೋಗದಲ್ಲಿ ಒಂದಾದ ಕ್ಷಯರೋಗ ಸಂಪೂರ್ಣ ನಿರ್ಮೂಲನೆಗೆ ಗಮನ ಕೊಡುವ ಅವಶ್ಯಕತೆ ಇದ್ದು, ಸರ್ಕಾರಿ ಹಾಗೂ ಖಾಸಗಿ ವೈದ್ಯರು, ಆರೋಗ್ಯ ಸಂಬಂಧಿತ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಮುಂಬರುವ 2025ಕ್ಕೆ ಜಿಲ್ಲೆಯನ್ನು ಸಂಪೂರ್ಣ ಕ್ಷಯರೋಗ ಮುಕ್ತವನ್ನಾಗಿಸಲು ಶ್ರಮಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ: Terrorists Killed: ಕಾಶ್ಮೀರದಲ್ಲಿ ಇಬ್ಬರು ಉಗ್ರರ ಉಡೀಸ್;‌ 4 ಎಕೆ 47 ವಶಕ್ಕೆ, ಭಾರಿ ಸಂಚು ಬಯಲು

ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಕ್ಷಯರೋಗ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಕ್ಷಯರೋಗ ಸಕ್ರಿಯ ಪ್ರಕರಣಗಳನ್ನು ಪತ್ತೆ ಹಚ್ಚಲು ಕಾರ್ಯಪ್ರವೃತ್ತರಾಗಬೇಕು. ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದಂತೆ ಈಗಲೂ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಐದು ವರ್ಷದೊಳಗಿನ ಮಕ್ಕಳು, 65 ವರ್ಷದೊಳಗಿನ ರೋಗಿಗಳು ಸೇರಿದಂತೆ ಸಂಶಯಾಸ್ಪದ ಕ್ಷಯರೋಗಿಗಳನ್ನು ಮುಂಚಿತವಾಗಿ ಪತ್ತೆಹಚ್ಚುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಕ್ಷಯರೋಗಿಗಳ ಸಕ್ರಿಯ ಪ್ರಕರಣಗಳ ಪತ್ತೆ ಕುರಿತಂತೆ ಪ್ರತಿ ಮಾಹೆ ವರದಿ ಸಲ್ಲಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷಯರೋಗ ಮುಕ್ತ ಮಾಡಲು ಪ್ರಯತ್ನಿಸಬೇಕು. ಕೆಮ್ಮು, ಕಫ, ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಕ್ಷಯರೋಗಿಗಳು ಪತ್ತೆ ಹಚ್ಚಿದ ತಕ್ಷಣ ರೋಗದಿಂದ ಗುಣಮುಖರಾಗುವವರೆಗೆ, ನಿರಂತರ ರೋಗಿಗಳ ಬಗ್ಗೆ ನಿಗಾ ಇಡುವ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಮಾಡುವಂತೆ ಡಿಸಿ ಸೂಚಿಸಿದರು.

ಇದನ್ನೂ ಓದಿ: Weather Report : ಇಂದು 9 ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಬೆಂಗಳೂರಲ್ಲಿ ಕಣ್ಣಾಮುಚ್ಚಾಲೆ

ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಪ್ರತಿ ಕ್ಷಯರೋಗಿಗೆ ಮಾಸಿಕ ರೂ.500 ಪೌಷ್ಠಿಕ ಆಹಾರದ ಸಲುವಾಗಿ ಗೌರವಧನವನ್ನು ಪೂರ್ಣ ಚಿಕಿತ್ಸೆ ಆಗುವವರೆಗೂ ನೀಡಲಾಗುವುದು, ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಪ್ರತಿ ಕ್ಷಯರೋಗಿಗೆ ಮಾಸಿಕ ರೂ.500 ಪೌಷ್ಠಿಕ ಆಹಾರದ ಸಲುವಾಗಿ ಗೌರವಧನವನ್ನು ಪೂರ್ಣ ಚಿಕಿತ್ಸೆ ಆಗುವವರೆಗೂ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 24/7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಅಥವಾ ನಿಕ್ಷಯ ಸಹಾಯವಾಣಿ 1800116666ಗೆ ಕರೆ ಮಾಡಿ ಜಿಲ್ಲಾ ಕ್ಷಯರೋಗ ನಿರ್ಮೂಲನೆಗೆ ಕರೆನೀಡಿ, ಆಗಸ್ಟ್ 2 ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ಯಾದಗಿರಿ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು ಸಂಜೀವಕುಮಾರ್‌ ಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Saud Shakeel: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಪಾಕ್​ ಆಟಗಾರ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ, ವೈದ್ಯಕೀಯ ಕಾಲೇಜು ಡೀನ್ ಡಾ.ಹನುಮಂತ ಪ್ರಸಾದ್, ಡಿಎಚ್‌ಒ ಡಾ.ಗುರುರಾಜ ಹಿರೇಗೌಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್, ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರಿಜ್ವಾನ ಆಫ್ರೀನ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಲಕ್ಷ್ಮಿಕಾಂತ ಕಾಂತ ಒಂಟೀಪೀರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಾಜಿದ್, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಡ್ರಗ್ ಕಂಟ್ರೋಲರ್ ನಿಯಂತ್ರಣಾಧಿಕಾರಿ ಪುಷ್ಪಪ್ರಿಯಾ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಉಪಸ್ಥಿತರಿದ್ದರು.

Exit mobile version