Site icon Vistara News

Yadgiri News: ಶ್ರದ್ಧೆಯಿಂದ ಓದಿ ಗುರಿ ಸಾಧಿಸಿಬೇಕು: ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ

Notebooks and pens were distributed to the students at Yadgiri

ಯಾದಗಿರಿ: ವಿದ್ಯಾರ್ಥಿನಿಯರು ಸಮಯ ಪರಿಪಾಲನೆ ಮಾಡಿ, ಶ್ರದ್ಧೆಯಿಂದ ಓದಿ (Study) ಉನ್ನತ ಗುರಿ (Goal) ಸಾಧಿಸಬೇಕು (Achieve) ಎಂದು ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿಗೌಡ ಮುದ್ನಾಳ ಹೇಳಿದರು.

ಯಾದಗಿರಿಯ ಜೈನ್ ಕಾಲೋನಿಯಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ಟಿ. ನಾರಾಯಣಸ್ವಾಮಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ನೋಟ್ ಬುಕ್, ಪೆನ್‌, ಚಾದರ್ ವಿತರಣೆ ಮಾಡಿ, ಅವರು ಮಾತನಾಡಿದರು.

ಇದನ್ನೂ ಓದಿ: Instagram Down: ಭಾರತದಲ್ಲಿ ಹಲವು ಬಳಕೆದಾರರಿಗೆ ಇನ್‌ಸ್ಟಾಗ್ರಾಮ್ ಡೌನ್!

ಹಣ, ವಸ್ತುಗಳನ್ನು ಕಸಿದುಕೊಳ್ಳಬಹುದು. ಆದರೆ, ನಾವು ಸಂಪಾದಿಸಿರುವ ಜ್ಞಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಜಗತ್ತಿನ ದೊಡ್ಡ ಆಯುಧ ಶಿಕ್ಷಣವಾಗಿದೆ. ಹೀಗಾಗಿ ಜ್ಞಾನ ಸಂಪತ್ತು ಹೆಚ್ಚಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.

ನಂತರ ಬಿಜೆಪಿಯ ಹಿರಿಯ ಮುಖಂಡ ಸಿದ್ದಣ್ಣಗೌಡ ಕಾಡಂನೋರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪರಶುರಾಮ ಕುರಕುಂದಿ ಮಾತನಾಡಿದರು.

ಇದನ್ನೂ ಓದಿ: 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಬಿಡ್‌ ಸಲ್ಲಿಸಲ್ಲ; ಗುಜರಾತ್‌ ಸರ್ಕಾರ ಸ್ಪಷ್ಟನೆ

ಈ ಸಂದರ್ಭದಲ್ಲಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ನಾಗಮ್ಮ ಹಿರೇಮಠ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ಶರಣಗೌಡ ಕ್ಯಾತನಾಳ, ಗೋವಿಂದಪ್ಪ ಕೊಂಚೆಟಿ, ನಾಗಶೆಟ್ಟಿ ಅಂಗಡಿ, ಶರಣು ತಂಗಡಗಿ, ರವಿ ಕಾಡಂಗೇರಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version