ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ ಟೀಕಾಚಾರ್ಯರ (Teikacharya) ಪೂರ್ವಾರಾಧನೆಯು (poorvaradhane) ಬಹು ವಿಜೃಂಭಣೆಯಿಂದ ಜರುಗಿತು.
ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಪಾದಂಗಳವರು ಮಂಗಳಾರತಿ, ಮೂಲ ರಾಮದೇವರ ಪೂಜೆ, ತೀರ್ಥ, ಪ್ರಸಾದ, ಮಂತ್ರಾಕ್ಷತೆ, ತಪ್ತಮುದ್ರಾ ಧಾರಣೆ ನೆರವೇರಿಸಿ, ಆಶೀರ್ವಚನ ನೀಡಿದರು.
ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥರು ಮತ್ತು ಅವರ ಶಿಷ್ಯರು ಗುಡ್ಡದಲ್ಲಿರುವ ಗ್ರಂಥ ಸಾಕ್ಷಿ ಪ್ರಾಣ ದೇವರ ನಮಸ್ಕರಿಸಿ, ಜಯತೀರ್ಥರು ತಪಸ್ಸು ಮಾಡಿ, ಗ್ರಂಥ ರಚಿಸಿದ ಗುಹೆಗೆ ತೆರಳಿ ಪೂಜೆ, ಮಂಗಳಾರತಿ ಕಾರ್ಯಕ್ರಮ ನೆರವೇರಿಸಿದರು.
ಇದನ್ನೂ ಓದಿ: Education News : ತಾಂಜಾನಿಯಾದಲ್ಲಿ ಐಐಟಿಯ ಮೊದಲ ವಿದೇಶಿ ಕ್ಯಾಂಪಸ್
ಸಾವಿರಾರು ಸಂಖ್ಯೆಯ ಭಕ್ತರು ಟೀಕಾಚಾರ್ಯರು ಗ್ರಂಥ ರಚಿಸಿದ ಗುಹೆಯ ದರ್ಶನ ಪಡೆದು ಪುನೀತರಾದರು. ಮಹಿಳಾ, ಪುರುಷ ಭಜನಾ ತಂಡದವರು ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು.
ತುಂತುರು ಮಳೆಯ ನಡುವೆಯೂ, ನೂರಾರು ಭಕ್ತರು ಆಗಮಿಸಿದ್ದರು. ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಆಗಮಿಸಿ ಗುಹೆಯಲ್ಲಿನ ಟೀಕಾಚಾರ್ಯಯರ ದರ್ಶನ ಪಡೆದು ಪುನೀತರಾದರು.
ಇದನ್ನೂ ಓದಿ: Viral News : ಮಳೆ ನೀರು ತುಂಬಿದ್ದ ರಸ್ತೆಯಲ್ಲಿ ಕೆಟ್ಟು ನಿಂತ ಕಾರು, ರಿಪೇರಿಗೆ ಬೇಕಾಯ್ತು 40 ಲಕ್ಷ ರೂಪಾಯಿ!
ಈ ಸಂದರ್ಭದಲ್ಲಿ ಸತ್ಯವಾದಾಚಾರ್ಯ ಗಟಾಲಿ, ಜಯತೀರ್ಥ, ಆನಂದ ಎಂ ಸವದಿ, ಪವನ್ ಕುಲಕರ್ಣಿ, ಗುರುರಾಜ ಕುಲಕರ್ಣಿ, ಚಂದ್ರಕಾಂತ ಕುಲಕರ್ಣಿ, ಸುರೇಶ ಯರಗೋಳ, ಶಿವರಾಮ್ ಪಾಟೀಲ್, ನಾಗೇಶ್ ಆಚಾರ್ಯ ಇತರರು ಪಾಲ್ಗೊಂಡಿದ್ದರು.