Site icon Vistara News

Yadgiri News: ಮೀನು ಮಾರುಕಟ್ಟೆಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ: ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು

MLA Channareddy Patil inaugurated the new fish market stalls in Yadgiri

ಯಾದಗಿರಿ: ಸುಸಜ್ಜಿತ ಮೀನು ಮಾರುಕಟ್ಟೆಯನ್ನು (fish market) ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಹೈಟೆಕ್ ಮೀನು ಮಾರುಕಟ್ಟೆಯ ಮಾರಾಟ ಮಳಿಗೆಗಳಲ್ಲಿ ಮೀನು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಮೀನುಗಾರರ ಬಡಾವಣೆಯಲ್ಲಿಯೇ ಇದ್ದು, ಹತ್ತಿರದಿಂದ ಎಲ್ಲರ ಸಮಸ್ಯೆಗಳನ್ನು ಕಂಡಿದ್ದೇನೆ. ಹೀಗಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ನನಗೆ ಗೊತ್ತಿದೆ. ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದಲ್ಲಿ ನಾನು ಪರಿಹರಿಸಲು ಮುತುವರ್ಜಿ ವಹಿಸುವೆ ಎಂದು ತಿಳಿಸಿದರು.

ಮೀನು ಮಾರುಕಟ್ಟೆಗೆ ಸಿಸಿ ರಸ್ತೆ, ಚರಂಡಿ ವಿದ್ಯುತ್ ಕಂಬಗಳ ಅಳವಡಿಸುವ ಕಾರ್ಯ ವಿಳಂಬವಾಗಿದ್ದು ನನ್ನ ಗಮನಕ್ಕೆ ಬಂದಿದ್ದು, ಚುನಾವಣೆ ಕಾರಣದಿಂದ ವಿಳಂಬವಾಗಿದೆ. ನಗರಸಭೆ ಅಧಿಕಾರಿಗಳು ಅತಿ ಶೀಘ್ರ ಈ ಕೆಲಸಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ISIS Terror : ರಾಜ್ಯದಲ್ಲಿ ರೊಬೋಟ್‌ ಬಳಸಿ ವಿಧ್ವಂಸಕ ಕೃತ್ಯ ನಡೆಸಲು ಪ್ಲ್ಯಾನ್‌ ಮಾಡಿದ್ದ ಉಗ್ರರು

ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾತನಾಡಿ, ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಮೀನುಗಾರರಿಗೆ ಮಾರಾಟ ಮಳಿಗೆ ಇರದೇ ಇದ್ದಿದ್ದರಿಂದ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡಿ ಬದುಕುವ ಪರಿಸ್ಥಿತಿ ಇತ್ತು, ಇದನ್ನು ಮನಗಂಡು ನಿರಂತರ ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಇಂದು ಹೈಟೆಕ್ ಮೀನು ಮಾರಾಟ ಮಳಿಗೆ ನಿರ್ಮಾಣಗೊಂಡಿದೆ ಎಂದರು.

ಅದರಲ್ಲೂ ವಿಶೇಷವಾಗಿ ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಗೆ ಕೃಷ್ಣ ಮತ್ತು ಭೀಮಾ ನದಿಗಳು ಅಲ್ಲದೇ ಅತಿಹೆಚ್ಚು ಕೆರೆಗಳಿರುವುದರಿಂದ ನಿಜವಾದ ಮೀನುಗಾರರಿಗೆ ಸಿಗಬೇಕಾದ ಸವಲತ್ತು ಸಿಗದೇ ಕೆಲವರ ಪಾಲಾಗುತ್ತಿತ್ತು. ಈ ನಿಟ್ಟಿನಲ್ಲಿ ಹೈಟೆಕ್ ಮೀನು ಮಾರಾಟ ಮಳಿಗೆ ಸೌಲಭ್ಯ ಸಿಕ್ಕಿದೆ. ಇನ್ನು ಮುಂದೆಯೂ ಸವಲತ್ತು ಪಡೆಯಲು ಹೋರಾಟವನ್ನು ಸಂಘಟಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: World Cup 2023 : ಪಾಕ್​ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜಣ್ಣ, ತಾಲೂಕು ಅಧಿಕಾರಿ ವೆಂಕಟೇಶ, ನಗರಸಭೆ ಎಇಇ ರಜನಿಕಾಂತ್, ಜೆಇ ರಾಕೇಶ್, ಮೇಘನಾಥ ಬೆಳ್ಳಿ, ನಾಗರಾಜ್, ರವಿ ದಾಸನ್, ಮಾನಪ್ಪ ಆರ್‌ಓ, ಮಲ್ಲಿಕಾರ್ಜುನ ಗೋಸಿ, ಮರೆಪ್ಪ ಬಿಳ್ಹಾರ, ತಾಯಪ್ಪ, ಕೃಷ್ಣಪ್ಪ, ಮಲ್ಲಪ್ಪ ಹಿರೇಬೋವಿ, ಭೀಮಣ್ಣ ಪೂಜಾರಿ, ದೇವಿಂದ್ರಪ್ಪ, ಯಂಕಪ್ಪ, ಮಲ್ಲಪ್ಪ, ಬಂಡಿ, ಅಂಬರೇಷ, ಯಲ್ಲಪ್ಪ ಗಂಟಿ ಸೇರಿದಂತೆ ಅನೇಕರು ಇದ್ದರು. ಶ್ರೀ ದುರ್ಗಾದೇವಿ ಮೀನುಗಾರರ ಸಂಘದ ಅಧ್ಯಕ್ಷ ನಿಂಗಪ್ಪ ಜಾಲಗಾರ ಸ್ವಾಗತಿಸಿದರು, ತ್ಯಾಗರಾಜ ನಿರೂಪಿಸಿದರು. ಕಾರ್ಯದರ್ಶಿ ದುರ್ಗಪ್ಪ ಶೇಗುಕರ್ ವಂದಿಸಿದರು.

Exit mobile version