ಯಾದಗಿರಿ: ಬಾಲಕಾರ್ಮಿಕ (Child Labor) ಹಾಗೂ ಕಿಶೋರ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ರವೀಂದ್ರ ಎಲ್.ಹೊನೋಲೆ ಹೇಳಿದರು.
ಜಿಲ್ಲೆಯ ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಕಚೇರಿ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ರೀಮ್ ಯೋಜನೆ, ಡಾನ್ ಬಾಸ್ಕೋ ಸಮಾಜ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ: World Cup 2023 : ಎಲ್ಲವೂ ಇಂಪೋರ್ಟೆಡ್; ವಿಶ್ವ ಕಪ್ ಕ್ರಿಕೆಟ್ ಸ್ಟೇಡಿಯಂಗಳಿಗೆ ಭರ್ಜರಿ ಕಾಯಕಲ್ಪ!
ಪ್ರತಿಯೊಂದೂ ಮಗುವಿಗೂ ಶಿಕ್ಷಣ ದೊರುಕುವಂತೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರದು ಎಂದು ಅವರು ಹೇಳಿದರು.
ಬಾಲಾಪರಾಧಿ ರಕ್ಷಣಾ ವಿಶೇಷ ಘಟಕದ ರಾಘವೇಂದ್ರ ಮಾತನಾಡಿ, ಬಾಲ ಕಾರ್ಮಿಕ ವಿರೋಧಿ ಕಾನೂನು 1986 ರನ್ವಯ 14 ವರ್ಷ ವಯೋಮಾನಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉದ್ಯೋಗ, 18 ಕ್ಕಿಂತೆ ಕಡಿಮೆ ಮಯೋಮಾನದ ಮಕ್ಕಳಿಗೆ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸುವುದು ಅಪರಾಧ. ಅಂತಹ ಘಟನೆಗಳು ಸೇರಿದಂತೆ ಮಕ್ಕಳ ಬಿಕ್ಷಾಟನೆ, ಮಕ್ಕಳ ಕಳ್ಳ ಸಾಗಾಟ, ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಘಟನೆಗಳು ಕಂಡು ಬಂದರೆ ಕೂಡಲೆ 1098 ಅಥವಾ 112ಗೆ ಮಾಹಿತಿ ನೀಡಿ ಎಂದು ಕೋರಿದರು.
ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾಲ ಕಾರ್ಮಿಕ ಪದ್ದತಿ ನಿಷೇಧದ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಜಾಗೃತಿ ಜಾಥಾ
ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಪಟ್ಟಣದ ಸಿಹಿ ನೀರ ಬಾವಿಯಿಂದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯವರೆಗೂ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಜರುಗಿತು.
ಇದನ್ನೂ ಓದಿ: NICE Road: ನೈಸ್ ರೋಡ್‌ನಲ್ಲಿ ಓಡಾಡ್ತೀರಾ?; ಜುಲೈ 1ರಿಂದ ದುಬಾರಿಯಾಗಲಿದೆ ಟೋಲ್ ದರ
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ತಾಲೂಕು ಪಂಚಾಯಿತಿ ಯೋಜನಾ ನಿರ್ದೇಶಕಿ ಭಾರತಿ ಸಜ್ಜನ, ಪಿಐ ದೌಲತ್ ಎನ್.ಕುರಿ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಬಿಳಾರ, ಕಾನೂನು ಸಲಹೆಗಾರ ಅನಂತರೆಡ್ಡಿ, ಸಿ.ಆರ್.ಪಿ. ಬಾಲಪ್ಪ, ಕಾರ್ಮಿಕ ನಿರೀಕ್ಷಕ ಶಿವರಾಜ ಪಾಟೀಲ, ಪುರಸಭೆ ಸದಸ್ಯ ನರಸಪ್ಪ ಗಡ್ಡಲ್ ಸೇರಿದಂತೆ ವಕೀಲರು, ಶಿಕ್ಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.