ಯಾದಗಿರಿ: ಶರಣರು ನಡೆದ ದಾರಿ, ಅವರ ತತ್ವ (Principle) ಸಿದ್ದಾಂತ ಮತ್ತು ಆದರ್ಶಗಳನ್ನು ಇಂದಿನ ಯುವ ಜನತೆ (Young People) ಜೀವನದದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯಾದಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಯ ಹಾಗೂ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿವಶರಣ ಹಡಪದ ಅಪ್ಪಣ್ಣನವರು 243 ಕ್ಕೂ ಹೆಚ್ಚು ವಚನಗಳು ಬರೆದು ಜನತೆಗೆ ದಾರಿ ದೀಪವಾಗಿವೆ ಎಂದರು.
ಇದನ್ನೂ ಓದಿ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ದಿಗ್ಗಜರ ನೇತೃತ್ವದಲ್ಲಿ ಗುರು ಪೂರ್ಣಿಮೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಸಂತೋಷರಾಣಿ ಮಾತನಾಡಿ, ತಿಕ್ಕಾಟ, ಕಂದಾಚಾರಗಳೆಂಬ ದುಸ್ಥಿತಿಯಿಂದ ಹೊರಬರಲು ಮನುಷ್ಯನ ಮನಸ್ಸಿಗೆ ಬದಲಾವಣೆ ಬಯಸಿ, ಮಾನವರ ಮನ ಬದಲಿಸಿ ಸಮಾಜದಲ್ಲಿ ಬದಲಾವಣೆ ತಂದವರು ಶರಣರು. ಕಲ್ಯಾಣ ಕರ್ನಾಟಕದಲ್ಲಿ ನಡೆದ ಅತಿ ದೊಡ್ಡ ಕ್ರಾಂತಿ ಸಾಮಾಜಿಕ ವಚನ ಕ್ರಾಂತಿ. ಈ ಕ್ರಾಂತಿಯಲ್ಲಿ ಶಿವಶರಣ ಹಡಪದ ಅಪ್ಪನವರ ಪಾತ್ರವೂ ಮಹತ್ವದ್ದು. ಆದರಿಂದ ಪ್ರತಿಯೊಬ್ಬರು ಅವರು ನಡೆದ ದಾರಿಯಲ್ಲಿ ನಡೆದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Video Viral : ಹಾವನ್ನು ಅಟ್ಟಾಡಿಸಿ ಕಚ್ಚಿದ ನಾಯಿ, ಹೆಡೆ ಎತ್ತಿ ವಿಷ ಕಕ್ಕಿದ ನಾಗರ; ಇಲ್ಲಿದೆ ರೋಚಕ ವಿಡಿಯೊ!
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆ ಅಧಿಕಾರಿ ರಾಜು ಭಾವಿಹಳ್ಳಿ, ಗುರುಪ್ರಸಾದ್ ವೈದ್ಯ, ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಅಯ್ಯಣ್ಣ, ಇಬ್ರಾಹಂಪುರ ಮುಖಂಡರಾದ ಮಲ್ಲಿಕಾರ್ಜುನ ದಿಗ್ಗಿ, ಭಾಗಣ್ಣ ಇಟಗಿ, ಶರಣಪ್ಪ ಹೋತಪೇಠ, ಸಂಗಮೇಶ ವಡಗೇರ, ಶಿವಕುಮಾರ ಅಬ್ಬೆ ತುಮಕೂರು, ಮಲ್ಲಿಕಾರ್ಜುನ ವಡಗೇರ, ಚನ್ನಪ್ಪ ಯರಗೊಳ, ಭರತ ವಡಗೇರ, ಸುನಿಲ್ ನಾಯ್ಕಲ್, ಕಮಲಾಕರ್ ವಡಗೇರ, ವಿರುಪಣ್ಣ, ಬಲವಂತ ಮೂದನುರ ಸೇರಿದಂತೆ ಇತರರು ಉಪಸ್ಥಿತರಿದ್ದರು.