Site icon Vistara News

YakshaVahini: ಫೆ.19ಕ್ಕೆ ʼಯಕ್ಷ ಸಾಹಿತ್ಯ ಸಾಂಗತ್ಯ-15ʼ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಆನ್‌ಲೈನ್‌ ಕಾರ್ಯಕ್ರಮ

#image_title

ಬೆಂಗಳೂರು: ಯಕ್ಷವಾಹಿನಿ ಸಂಸ್ಥೆ ವತಿಯಿಂದ ಫೆ.19ರಂದು ಸಂಜೆ 6 ಗಂಟೆಗೆ ʼಯಕ್ಷ ಸಾಹಿತ್ಯ ಸಾಂಗತ್ಯ-15ʼ ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಆನ್‌ಲೈನ್‌ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಖ್ಯಾತ ಕತೆಗಾರ ಹಾಗೂ ಪ್ರಬಂಧಕಾರ ಕೆ. ಸತ್ಯನಾರಾಯಣ ಅವರಿಂದ ಮೈರ್ಪಾಡಿ ವೆಂಕಟರಮಣಯ್ಯ ಅವರ ರಚನೆಯ ‘ಭಕ್ತ ಪ್ರಹ್ಲಾದ’ ಪ್ರಸಂಗದ ಸಾಹಿತ್ಯಾವಲೋಕನ ನಡೆಯಲಿದೆ.

ಖ್ಯಾತ ರಂಗಕರ್ಮಿ ಮುಖ್ಯ ಅತಿಥಿಗಳಾಗಿ ದೇವೇಂದ್ರ ಬೆಳೆಯೂರ್‌, ಸಮನ್ವಯಕಾರ ಖ್ಯಾತ ಯಕ್ಷಗಾನ ವಿದ್ವಾಂಸ ಡಾ. ಆನಂದರಾಮ ಉಪಾಧ್ಯ ಭಾಗವಹಿಸಲಿದ್ದಾರೆ. ಶ್ರೀಧರ ಡಿ. ಎಸ್, ಪ್ರೊ. ಎಮ್. ಎಲ್. ಸಾಮಗ, ಗಿಂಡಿಮನೆ ಮೃತುಂಜಯ, ನಟರಾಜ ಉಪಾಧ್ಯ, ಅನಂತ ಪದ್ಮನಾಭ ಫಾಟಕ್, ಇಟಗಿ ಮಹಾಬಲೇಶ್ವರ ಭಟ್, ವೇ ಅಜಿತ್ ಕಾರಂತ್ ಹಾಗೂ ಲನಾ ಭಟ್ ಅವರು ಸಲಹೆ ಸಹಕಾರ ನೀಡಲಿದ್ದಾರೆ. ರವಿ ಮಡೋಡಿ ಅವರು ಕಾರ್ಯಕ್ರಮದ ಪರಿಕಲ್ಪನೆ ಹಾಗೂ ಸಂಯೋಜನೆ ಮಾಡಿದ್ದಾರೆ.

Yaksha Vahini Prathistana ಫೇಸ್‌ಬುಕ್‌ ಖಾತೆಯಲ್ಲಿ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಸಂಪರ್ಕ ಸಂಖ್ಯೆ: 9986384205, 9632824391.

ಯಕ್ಷ ಸಾಹಿತ್ಯ ಸಾಂಗತ್ಯ-15 ಜೂಮ್‌ ಲಿಂಕ್‌: Zoom link to join: https://us02web.zoom.us/j/83347321235

ಯಕ್ಷ ಸಾಹಿತ್ಯ ಸಾಂಗತ್ಯ-15 ಫೆಸ್‌ಬುಕ್‌ ಲಿಂಕ್‌: Facebook broadcast at: https://www.facebook.com/yakshavahiniprathistana/

ಇದನ್ನೂ ಓದಿ | karnataka budget 2023 : ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್​ನಲ್ಲಿ ಹಲವು ಯೋಜನೆ

Exit mobile version