Site icon Vistara News

Yakshagana Program : ಬಾಲ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ; ಯಶಸ್ವಿ ಪ್ರದರ್ಶನ

Yakshagana Kanakangi Kalyana child artistes

ಬೆಂಗಳೂರು: ಗಿರಿನಗರದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿ ಕರ್ನಾಟಕ ಕಲಾದರ್ಶಿನಿ‌ ತಂಡದ‌ ಗಿರಿನಗರ ಶಾಖೆಯ ಬಾಲ ಕಲಾವಿದರಿಂದ ಕನಕಾಂಗಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗ (Yakshagana Program) ಶನಿವಾರ (ಡಿ.೩೧) ನಡೆಯಿತು.

Yakshagana Program

ಖ್ಯಾತ ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ ಅವರ ಮಾರ್ಗದರ್ಶನದಲ್ಲಿ ಪೂರ್ವರಂಗ ಮತ್ತು ಯಕ್ಷಗಾನ ಪ್ರಸಂಗವು ಮಕ್ಕಳಿಂದ ಪ್ರದರ್ಶನಗೊಂಡವು.

ಬಾಲ‌ ಕಲಾವಿದರಾಗಿ ಸುಧನ್ವ ಭಟ್, ರಮ್ಯಶ್ರೀ, ರಘುವೀರ್ ಪಾಂಗಣ್ಣಾಯ ಎಸ್.ಬಿ, ಧೃತಿ ಅಮ್ಮೆಂಬಳ, ಅಭಿಶ್ರೀ ಶ್ರೀಹರ್ಷ ಭಟ್ಟ, ಶ್ರೇಯಸ್ ಸರಳಾಯ, ಶ್ರೀವತ್ಸ ಸರಳಾಯ, ಆಯುಷ್ ಎಸ್, ಕೃಷ್ಣ ಭಟ್, ಸಾಯಿ ಪ್ರಣಾಮ್, ಸೃಷ್ಟಿ ಚೇತನ್ ಜಯಂತ, ಕೃತಿ ಅಮ್ಮೆಂಬಳ, ಇಶಾನಿ ಎಸ್, ಶ್ರೇಷ್ಠ ಚೇತನ್ ಜಯಂತ ಭಾಗವಹಿಸಿದ್ದರು.

Yakshagana Program

ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ಮೃದಂಗ ಮತ್ತು ಚಂಡೆ ವಾದಕರಾಗಿ ರಾಘವೇಂದ್ರ ಬಿಡುವಾಳ, ಸುಬ್ರಹ್ಮಣ್ಯ ಸಾಸ್ತಾನ ಭಾಗವಹಿಸಿದ್ದರು.

ಮಹಾಭಾರತದ ಕಥಾನಕ ಒಂದನ್ನು ಆಧರಿಸಿದ ಈ ಪ್ರಸಂಗದಲ್ಲಿ ಬಲರಾಮನ ಮಗಳು ಕನಕಾಂಗಿಯ ವಿವಾಹದ ಕುರಿತಾಗಿ ಕೌರವನ ಮಗ ಲಕ್ಷಣ ಮತ್ತು‌ ಸುಭದ್ರೆಯ ಮಗ ಅಭಿಮನ್ಯುವಿನ ನಡುವಿನ ಗೊಂದಲದ ಹಾಗೂ ಕೃಷ್ಣನ ಚತುರತೆಯ ವಿನೋದಕರ ಪ್ರಸಂಗವನ್ನು ಮಕ್ಕಳು ಸುಲಲಿತವಾಗಿ ಅಭಿನಯಿಸಿದರು.

Yakshagana Program

ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರ ಮಠದ ಸಂಯೋಜಕ ವಾದಿರಾಜ‌ ಸಾಮಗ ಉದ್ಘಾಟಿಸಿದರು. ಅತಿಥಿಗಳಾಗಿ ಪತ್ರಕರ್ತ ನವೀನ ಅಮ್ಮೆಂಬಳ ಭಾಗವಹಿಸಿ ಮಾತನಾಡಿದರು. ಶ್ರೀನಿವಾಸ ಸಾಸ್ತಾನ ಅವರು ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಮಹತ್ವದ ಬಗ್ಗೆ ವಿವರಿಸಿದರು.

ಇದನ್ನೂ ಓದಿ | Siddheshwar swamiji | ಸಿದ್ದೇಶ್ವರ ಸ್ವಾಮಿಗಳಿಗೆ ಸರ್ಕಾರಿ ಗೌರವ, ತ್ರಿವರ್ಣ ಧ್ವಜ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ

Exit mobile version