ಬೆಂಗಳೂರು: ಯಕ್ಷಸಿಂಚನ ಟ್ರಸ್ಟ್ (Yakshasinchana Trust) ಹಾಗೂ ಕರ್ನಾಟಕ ಸಂಘ ಜಂಟಿಯಾಗಿ ನಾಟ್ಯ ದರ್ಶನ್-2022 ಕಾರ್ಯಕ್ರಮವನ್ನು ಚೆನ್ನೈನಲ್ಲಿ ಆಯೋಜಿಸಿದೆ. ಇದೇ ಡಿಸೆಂಬರ್ 17 ಮತ್ತು 18ರಂದು ಡಾ. ಯು ರಾಮರಾವ್ ಕಲಾಮಂಟಪ ಹಾಗೂ ಭಾರತೀಯ ವಿದ್ಯಾ ಭವನ ಆಡಿಟೋರಿಯಮ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.
ಡಿ. 17 ರಂದು ಚೆನ್ನೈನ ಡಿ.ನಗರದಲ್ಲಿರುವ ಡಾ ಯು ರಾಮರಾವ್ ಕಲಾಮಂಟಪದಲ್ಲಿ ಸಂಜೆ ೬ ಗಂಟೆಗೆ ಜಾಂಬವತಿ ಕಲ್ಯಾಣ ಯಕ್ಷಗಾನ ನಡೆಯಲಿದೆ. ಚಿತ್ಕಲಾ ತುಂಗಾ, ಚಿನ್ಮಯ್ ಅಂಬರಗೋಡ್ಲು, ಕೃಷ್ಣಮೂರ್ತಿ ತುಂಗ ಅವರ ಹಿಮ್ಮೇಳ ಇದ್ದು, ರವಿ ಮಡೋಡಿ, ಆದಿತ್ಯ ಉಡುಪ ಹಾಗೂ ಪ್ರದೀಪ್ ಮಧ್ಯಸ್ತ, ಮಂಜುನಾಥ್.ಎಚ್, ಪ್ರಣವಿ ಅವರ ಮುಮ್ಮೇಳ ಇರಲಿದೆ. ಕೃಷ್ಣಮೂರ್ತಿ ತುಂಗಾ ಮುಮ್ಮೇಳದ ಜತೆಗೆ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಡಾ. ಆನಂದರಾಮ ಉಪಾಧ್ಯರ ಪ್ರಸ್ತಾವನೆ ಇರಲಿದೆ.
ಡಿ. 18 ರಂದು ಚೆನ್ನೈನ ಮೈಲಾಪುರದ ಭಾರತೀಯ ವಿದ್ಯಾ ಭವನ ಆಡಿಟೋರಿಯಮ್‌ನಲ್ಲಿ ಬೆಳಗ್ಗೆ 9.30ಕ್ಕೆ ಕಂಸವಧೆ ನಡೆಯಲಿದೆ. ಚಿತ್ಕಲಾ ತುಂಗಾ, ಚಿನ್ಮಯ್ ಅಂಬರಗೋಡ್ಲು, ಕೃಷ್ಣಮೂರ್ತಿ ತುಂಗ ಅವರ ಹಿಮ್ಮೇಳ ಇದ್ದು, ರವಿ ಮಡೋಡಿ, ಆದಿತ್ಯ ಉಡುಪ ಹಾಗೂ ಪ್ರದೀಪ್ ಮಧ್ಯಸ್ತ, ಮಂಜುನಾಥ್.ಎಚ್, ಪ್ರಣವಿ ಅವರ ಮುಮ್ಮೇಳ ಇರಲಿದೆ. ಕೃಷ್ಣಮೂರ್ತಿ ತುಂಗಾ ಮುಮ್ಮೇಳದ ಜತೆಗೆ ನಿರ್ದೇಶನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಡಾ. ಆನಂದರಾಮ ಉಪಾಧ್ಯರ ಪ್ರಸ್ತಾವನೆ ಇರಲಿದೆ.