ಮುಂಡಗೋಡ: ನಾನು ಇಲ್ಲಿಯವರೆಗೂ ಬಿಜೆಪಿ ಶಾಸಕ (BJP MLA). ಮುಂದಿನ ಭವಿಷ್ಯ (Future) ಹೇಳಲು ನಾನು ಜ್ಯೋತಿಷಿ (Astrologer) ಅಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಸೋಮವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ತಿಂಗಳು ಕಾಂಗ್ರೆಸ್ ಸೇರ್ಪಡೆ ಆಗುತ್ತೀರಿ ಎಂಬ ವದಂತಿ ಇದೆ ಎಂಬುವ ಪ್ರಶ್ನೆಗೆ ಮುಗುಳುನಗೆಯಿಂದ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಗಳನ್ನು ರಾಜಕೀಯ ಉದ್ದೇಶದಿಂದ ಭೇಟಿ ಆಗಿಲ್ಲ. ಕ್ಷೇತ್ರದಲ್ಲಿ ಮಳೆ ಕಡಿಮೆಯಾಗಿ ಬೆಳೆ ಹಾನಿಯಾಗಿದೆ. ನನ್ನ ಕ್ಷೇತ್ರವನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದ್ದೇನೆ ವಿನಃ ಬೇರೆ ಯಾವ ರಾಜಕೀಯ ವಿಷಯಗಳ ಬಗ್ಗೆ ಚರ್ಚೆಸಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Asia Cup: ಪಾಕ್ ವಿರುದ್ಧ ಗರ್ಜಿಸಲು ಸಜ್ಜಾದ ಕನ್ನಡಿಗ ಕೆ.ಎಲ್ ರಾಹುಲ್
ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಉದ್ಘಾಟಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಕರೆತರುವ ಉದ್ದೇಶವಿದೆ. ಈಗಾಗಲೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. ನೀರಾವರಿ ಯೋಜನೆಯ ವಿದ್ಯುತ್ ಜೋಡಣಾ ಕಾರ್ಯಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಮಾಣಪತ್ರ ನೀಡುತ್ತಾರೆ ತದನಂತರ ಜಲ ಸಂಪನ್ಮೂಲ ಇಲಾಖೆಯು ಉದ್ಘಾಟನೆಗೆ ಅನುಮತಿ ನೀಡದ ನಂತರವೇ ದಿನಾಂಕವನ್ನು ನಿಗಧಿಪಡಿಸಲಾಗುವುದು ಎಂದು ತಿಳಿಸಿದರು.
ಯಲ್ಲಾಪುರ ಕ್ಷೇತ್ರದಲ್ಲಿ ಶೇ. 70ರಷ್ಟು ಮಳೆ ಕಡಿಮೆ ಆಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಬ್ಬು ಬೆಳೆ ಕೂಡ ಕುಂಠಿತಗೊಂಡಿದೆ. ರಾಜ್ಯದ 176 ತಾಲೂಕಿನಲ್ಲಿ ಬರದ ಚಾಯೆ ಇದೆ. ಈ ಬಗ್ಗೆ ಕೃಷಿ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ಹವಮಾನ ಇಲಾಖೆಯವರು ಸೆಪ್ಟೆಂಬರ್ ದಲ್ಲಿ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: DP Manu: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಮಿಂಚಿದ ಕನ್ನಡಿಗ ಮನು; ಯಾರಿವರು? ಇವರ ಹಿನ್ನೆಲೆ, ಸಾಧನೆ ಏನೇನು?
ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರದ ಮಾರ್ಗಸೂಚಿಯಿಂದ ಸಾಧ್ಯವಿಲ್ಲ. ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಮಾಡಬೇಕಾಗುತ್ತದೆ. ಕೇಂದ್ರದ ಸರ್ಕಾರ ಆದೇಶದಲ್ಲಿ ಶೇ 60ರಷ್ಟು ಬೆಳೆ ಹಾನಿಯಾದರೆ ಮಾತ್ರ ಬರಪೀಡಿತ ಮಾಡಲು ಅವಕಾಶವಿದೆ. ಕೇಂದ್ರದ ಈ ಮಾರ್ಗಸೂಚಿ ಯನ್ನು 30ಕ್ಕೆ ಇಳಿಸುವಂತೆ ಆಗಬೇಕು ಎಂದು ಹೇಳಿದರು.