ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 2023-24 ನೇ ಸಾಲಿನ ಯಲ್ಲಾಪುರ ವಲಯ ಮಟ್ಟದ (Zonal level Sports) ಪ್ರೌಢಶಾಲಾ ವಿದ್ಯಾರ್ಥಿಗಳ (High school Students) ಇಲಾಖಾ ಕ್ರೀಡಾಕೂಟದಲ್ಲಿ (Sports) ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬಾಲಕರ ವೈಯಕ್ತಿಕ ವಿಭಾಗದಲ್ಲಿ ಮಂಜುನಾಥ ಮರಾಠಿ 110 ಮೀ ಹರ್ಡಲ್ಸ್ ಪ್ರಥಮ, 200 ಮೀ ಓಟ ದ್ವಿತೀಯ, 100 ಮೀ ಓಟ ತೃತೀಯ, ಬಾಲಚಂದ್ರಕುಣಬಿ 800 ಮೀ ಓಟ ಪ್ರಥಮ, ಸಂಕೇತ ನಾಯ್ಕ 110 ಮೀ ಹರ್ಡಲ್ಸ್ ದ್ವಿತೀಯ, ಉದ್ದಜಿಗಿತ ದ್ವಿತೀಯ, ಚಕ್ರಎಸೆತ ತೃತೀಯ, ಕೃಷ್ಣ ಕಾರುಂಡೆ ಹ್ಯಾಮರ್ ಎಸೆತ ಪ್ರಥಮ, ಭೂಮೇಶ ಗೌಡ 100 ಮೀ ಓಟ ದ್ವಿತೀಯ, ಸೂರಜ್ ಸಿದ್ದಿ 5 ಕಿ ಮೀ ನಡಿಗೆ ದ್ವಿತೀಯ, ಜ್ಞಾನೇಶ್ವರ ಜಂಗ್ಲೆ ಪೋಲ್ ವಾಲ್ಟ್ ತೃತೀಯ, ನವೀನ ಸಿದ್ದಿ ಎತ್ತರ ಜಿಗಿತ ಪ್ರಥಮ, ಪೋಲ್ ವಾಲ್ಟ್ ಪ್ರಥಮ ಹಾಗೂ 5 ಕಿ ಮೀ ನಡಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಇದನ್ನೂ ಓದಿ: Chandrayaan -3 : ರೋವರ್ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಹೊರಟ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ
ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಮಹಾಲಕ್ಷ್ಮೀ ಕಟ್ಟಿಮನಿ ಉದ್ದಜಿಗಿತ ಪ್ರಥಮ, 100 ಮೀ ಓಟ ಪ್ರಥಮ, ಸಾನಿಯಾ ಬನ್ನೂರ 1500 ಮೀ ಓಟ ಪ್ರಥಮ, 200 ಮೀ ಓಟ ತೃತೀಯ, ಹರ್ಷಿತಾ ಪಟಗಾರ 3000 ಮೀ ಓಟ ಪ್ರಥಮ, ಪ್ರಜ್ಞಾ ಬಾಂದೇಕರ ಗುಂಡು ಎಸೆತ ಪ್ರಥಮ, ಜಾವಲಿನ್ ಎಸೆತ ದ್ವಿತೀಯ, ಎತ್ತರಜಿಗಿತ ತೃತೀಯ, ಪ್ರಿಯಾಂಕಾ ಗೌಡ ಗುಂಡು ಎಸೆತ ದ್ವಿತೀಯ, ಅನಿಶಾ ಮರಾಠಿ ಚಕ್ರಎಸೆತ ದ್ವಿತೀಯ, ಶ್ವೇತಾ ಉಡುಪಿ 110 ಮೀ ಹರ್ಡಲ್ಸ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದ ಗುಂಪು ಆಟದಲ್ಲಿ 4*100 ಮೀ ರಿಲೇ ಪ್ರಥಮ, ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಖೋಖೋ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಕಬಡ್ಡಿ ದ್ವಿತೀಯ ಹಾಗೂ ಬಾಲಕಿಯರ ವಿಭಾಗದ ಗುಂಪು ಆಟದಲ್ಲಿ ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕ್ರೀಡಾಕೂಟದ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಶಾಲೆ ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: Chandrayaan 3 : ಮಿಷನ್ ಚಂದ್ರಯಾನ 3 ಯಶಸ್ಸಿನಲ್ಲಿ ಒಂದೇ ಊರಿನ ಮೂವರು ವಿಜ್ಞಾನಿಗಳು ಭಾಗಿ!
ಕುಮಾರ ನವೀನ್ ಸಿದ್ದಿ ವೈಯಕ್ತಿಕ 3 ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವ ಮೂಲಕ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದ್ದಾರೆ.