Site icon Vistara News

Yallapura News: ಎಸ್ಎಸ್ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿ ಬದುಕಿನಲ್ಲಿ ಮುಖ್ಯ ಘಟ್ಟ: ಶ್ರೀರಾಮ ಹೆಗಡೆ

Field Coordinator Sriram Hegde yallapura

#image_title

ಯಲ್ಲಾಪುರ: ವಿದ್ಯಾರ್ಥಿ ಬದುಕಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯು (SSLC exam) ಮುಖ್ಯವಾದ ಘಟ್ಟವಾಗಿದೆ. ಅಧ್ಯಯನ, ಮನನಗಳಿಂದ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಂಯೋಜನೆಯಲ್ಲಿ ತಾಲೂಕಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಎಲ್ಲ ವಿಷಯಗಳಲ್ಲಿ ಉತ್ತಮ ಅಂಕ ಬರುವಲ್ಲಿ ಹಾಗೂ ಪರೀಕ್ಷಾ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿ ವಾರ ಪ್ರೇರಣಾ ತರಗತಿಗಳನ್ನೂ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಭಾಭವನದಲ್ಲಿ ಬುಧವಾರ (ಮಾ.8) ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಲ್ಲಾಪುರ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸುವ ಅವಕಾಶ ಕಲ್ಪಿಸಲು ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯು ಎರಡು ದಿನಗಳ ಪ್ರೇರಣಾ ಶಿಬಿರವನ್ನು ಆಯೋಜಿಸಿರುವುದು ಮಾದರಿಯ ಸಂಗತಿಯಾಗಿದೆ ಎಂದರು.

ಇದನ್ನೂ ಓದಿ: High Court Recruitment 2023 : ರಾಜ್ಯ ಹೈಕೋರ್ಟ್‌ನಲ್ಲಿ 39 ಚಾಲಕ ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಶಿಕ್ಷಣ ಎಲ್ಲರ ಹಕ್ಕು. ಅದನ್ನು ಪಡೆಯುವುದು ಒಂದು ಭಾಗ್ಯವಾಗಿದೆ. ವಿದ್ಯಾರ್ಥಿಗಳು ತಜ್ಞರಿಂದ ಕಲಿತುಕೊಳ್ಳುವ ಅವಕಾಶವನ್ನು ಕಲ್ಪಿಸಿದ್ದೇವೆ. ಶಿಕ್ಷಣಕ್ಕಾಗಿ ವಲಸೆ ಹೋಗುವ ಸನ್ನಿವೇಶ ತಪ್ಪಬೇಕು. ನಾವಿರುವಲ್ಲಿಯೇ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ತೆರೆಯಬೇಕು ಆ ಕಾರ್ಯವನ್ನು ವಿಶ್ವ ದರ್ಶನ ಶಿಕ್ಷಣ ಸಂಸ್ಥೆ ಕೈಗೆತ್ತಿಕೊಂಡಿದೆ. ವಿದ್ಯಾರ್ಥಿಗಳು ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು” ಎಂದು ಸಭಾಧ್ಯಕ್ಷತೆಯನ್ನು ನಿರ್ವಹಿಸಿದ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಸಂದೇಶ ನೀಡಿದರು.

ಇದನ್ನೂ ಓದಿ: ಅಣ್ಣಾಮಲೈ ವಿರುದ್ಧ ಆಕ್ರೋಶ: ತ.ನಾಡು ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಪದಾಧಿಕಾರಿಗಳು

ಪ್ರೇರಣಾ ಶಿಬಿರದ ಸಂಯೋಜನೆ, ನೀತಿ ನಿಯಮಾವಳಿಗಳನ್ನು ಕಾಲೇಜಿನ ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ್ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಕ್ತಾ ಶಂಕರ, ಕೇಂದ್ರೀಯ ಶಾಲೆಯ ಪ್ರಾಚಾರ್ಯ ಮಹಾದೇವಿ ಭಟ್ ಉಪಸ್ಥಿತರಿದ್ದರು.

ರಂಜಿತಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ವಿಭಾಗದ ಸಿಬ್ಬಂದಿ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಿಬ್ಬಂದಿ ಕಾರ್ಯಕ್ರಮದ ಸಂಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಾಲೂಕಿನ ಸುಮಾರು 120 ವಿದ್ಯಾರ್ಥಿಗಳು ಪ್ರೇರಣಾ ತರಗತಿಯ ಪ್ರಯೋಜನವನ್ನು ಪಡೆದುಕೊಂಡರು.

ಇದನ್ನೂ ಓದಿ: 2nd PU Exam 2023: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಶುರು; ಮೇ ಮೊದಲ ವಾರ ಫಲಿತಾಂಶ ಎಂದ ಸಚಿವ ಬಿ.ಸಿ. ನಾಗೇಶ್‌

Exit mobile version