ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ (Yallapura News) ವಿಶ್ವ ದರ್ಶನ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಿಶ್ವ ದರ್ಶನ ಸಂಭ್ರಮ-2023 ಕಾರ್ಯಕ್ರಮ ಶನಿವಾರ (ಜ.೨8) ನಡೆಯಲಿದ್ದು, ಸಕಲ ಸಿದ್ಧತೆ ಭರದಿಂದ ಸಾಗಿದೆ.
ಇದೇ ಸಂದರ್ಭದಲ್ಲಿ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಯೂ ನಡೆಯಲಿದೆ. ಸಾಮಾಜಿಕ ಚಿಂತಕರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ವಿಶ್ವ ದರ್ಶನ ಸೆಂಟ್ರಲ್ ಸ್ಕೂಲ್‌ನ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ನಂತರ ವಿಶ್ವ ದರ್ಶನ ಸಂಭ್ರಮ-2023 ವೇದಿಕೆಯ ಕಾರ್ಯಕ್ರಮವನ್ನು ವಿಧಾನಸಭೆ ಸಭಾಧ್ಯಕ್ಷ, ಶಿರಸಿ-ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೆರವೇರಿಸಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪಂಚಾಯತ್ ರಾಜ್ ವಿಕೇಂದ್ರೀಕರಣ ಉಪ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಯಲ್ಲಾಪುರ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Lakhimpur Kheri Case: ಜೈಲಿನಿಂದ ಹೊರನಡೆದ ಕೇಂದ್ರ ಸಚಿವರ ಪುತ್ರ ಆಶೀಷ್ ಮಿಶ್ರಾ
ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ವಿಸ್ತಾರ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ, ವಿಸ್ತಾರ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಬೆಂಗಳೂರಿನ ಮೆಗಾಲೈಟ್ ಇಂಡಸ್ಟ್ರೀಸ್ ಎಂಡಿ ಎಚ್.ವಿ. ಧರ್ಮೇಶ್, ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ, ಸುಭದ್ರಾ ಇಂಡಸ್ಟ್ರೀಸ್, ವಿಜಯಲಕ್ಷ್ಮೀ ಸಾರಿಗೆ ಸಂಸ್ಥೆಯ ಎಂಡಿ ಹಾಗೂ ವಿಸ್ತಾರ ಮೀಡಿಯಾ ಪ್ರೈವೆಟ್ ಲಿಮಿಟೆಡ್ ನಿರ್ದೇಶಕ ಶ್ರೀನಿವಾಸ ಎಸ್. ಹೆಬ್ಬಾರ್ ಉಪಸ್ಥಿತರಿರುವರು.
ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯಿಂದ ನೀಡುವ 2023ನೇ ಸಾಲಿನ ವಿಶ್ವ ದರ್ಶನ ಪುರಸ್ಕಾರಕ್ಕೆ ಬೆಂಗಳೂರಿನ ವಾಗ್ದೇವಿ ವಿಲಾಸ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಹರೀಶ್ ಹಾಗೂ ಬೆಂಗಳೂರಿನ ನ್ಯೂ ಬಾಲ್ಡ್‌ವಿನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಟಿ. ವೇಣುಗೋಪಾಲ್ ಅವರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ | Fake Marks Card: ದೇಶದ ವಿವಿಗಳ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಭೇದಿಸಿದ ಸಿಸಿಬಿ; 30 ಸಾವಿರಕ್ಕೆ ಸಿಗುತ್ತಿತ್ತು ವಿವಿ ಪದವಿ!