Site icon Vistara News

Yoga Day 2022 | ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಇಲ್ಲಿದೆ ಸಂಭ್ರಮದ ಝಲಕ್‌

Yoga Day 2022

ಬೆಂಗಳೂರು : ಮಂಗಳವಾರ (ಜೂನ್‌ 21) ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (Yoga Day 2022) ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ʻಮಾನವೀಯತೆಗಾಗಿ ಯೋಗʼ ಎಂಬ ಘೋಷವಾಕ್ಯದಲ್ಲಿ ಈ ಬಾರಿಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಒಂದೆಡೆ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಸಂಭ್ರಮ ದುಪ್ಪಟ್ಟಾಗಿದೆ. ಬೆಂಗಳೂರಿನ ವಿವಿಧೆಡೆಯಲ್ಲಿ ಮುಂಜಾನೆಯಿಂದಲೇ ಯೋಗ ದಿನಾಚರಣೆ ಅಂಗವಾಗಿ ಹಲವೆಡೆ ಉತ್ಸಾಹದಿಂದ ಯೋಗಭ್ಯಾಸ ಮಾಡಲಾಯಿತು.

ಮೆಯೋ ಹಾಲ್ ಕೋರ್ಟ್ ಆವರಣದಲ್ಲಿ ಯೋಗ

ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ನಗರದ ಎಂ.ಜಿ.ರಸ್ತೆಯ ಮೆಯೋ ಹಾಲ್ ಕೋರ್ಟ್ ಆವರಣದಲ್ಲಿ ನ್ಯಾಯಮೂರ್ತಿಗಳು, ವಕೀಲರು, ಸಿಬ್ಬಂದಿ ವರ್ಗದವರು ಯೋಗಾಭ್ಯಾಸ ಮಾಡಿದರು.

Yoga Day 2022

ʻನಮ್ಮ ಚಿತ್ತ ಕರ್ತವ್ಯದತ್ತʼ ಎಂಬ ಧ್ಯೇಯ ವಾಕ್ಯದೊಂದಿಗೆ ಯೋಗಾಭ್ಯಾಸ ಮಾಡಿದರು. ಪರಿವರ್ತನಾ ಯೋಗ ಫೌಂಡೇಶನ್ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನೂರಾರು ವಕೀಲರು, ಕೋರ್ಟ್ ಸಿಬ್ಬಂದಿ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | Yoga Day 2022 | ಹಿಜಾಬ್ ಧರಿಸಿ ಗೋಳಗುಮಟ್ಟದ ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಯೋಗ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಯೋಗ ದಿನಾಚರಣೆ

ಸಿಆರ್‌ಪಿಎಫ್‌ ಹಾಗೂ ಆಯುಷ್ಮಾನ್ ಯೋಗ ಸಹಭಾಗಿತ್ವದಲ್ಲಿ ಲಾಲ್‌ಬಾಗ್‌ನಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. 750ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರು ಹಾಗೂ ಕುಟುಂಬಸ್ಥರು ಯೋಗ ಆಚರಣೆಯಲ್ಲಿ ಭಾಗಿಯಾಗಿದ್ದರು. ಯೋಗ ಗುರು ವಿಶಾಲ್‌ರಿಂದ ಯೋಗಾಭ್ಯಾಸ ನಡೆದಿದ್ದು, ಕೇರಳ ಹಾಗೂ ಕರ್ನಾಟಕದ ಸಿಆರ್‌ಪಿಎಫ್‌, ಐಜಿಪಿ ರಾಜೇಶ್ ಖುರಾನಾ ಭಾಗಿ ಆಗಿದ್ದರು.

Yoga Day 2022

ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಯೋಗ

ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್, ನೆಮ್ಮದಿ ಯೋಗ ಶಾಲೆ ಮತ್ತು ಪ್ರಣವ ಯೋಗ ಪ್ರತಿಷ್ಠಾನದ ಸಹಯೋಗದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ಶಂಕರಮಠ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಂತರಾಷ್ಟ್ರೀಯ 8ನೇ ಯೋಗ ದಿನಾಚರಣೆಯಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಭಾಗವಹಿಸಿದ್ದರು.

ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ, ಎಸ್. ಹರೀಶ್, ನೆ.ಲ.ನರೇಂದ್ರ ಬಾಬು, ವೆಂಕಟೇಶಮೂರ್ತಿ, ಟ್ರಸ್ಟಿನ ಅಧ್ಯಕ್ಷ ಜಯರಾಮಯ್ಯ, ವೆಂಕಟೇಶ್, ನಿಸರ್ಗ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ಸಾವಿರಕ್ಕೂ ಅಧಿಕ‌ ಯೋಗ ಪಟುಗಳು ಭಾಗವಹಿಸಿದ್ದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣದಲ್ಲಿ ಯೋಗ

ಬೆಂಗಳೂರು ನಗರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಆಯುಷ್, ಜೀವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತೋಟಗಾರಿಕಾ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣದಲ್ಲಿ ಯೋಗ ದಿನಾಚರಣೆ ಮಾಡಲಾಯಿತು.

Yoga Day 2022

ಯೋಗ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಸಾಮಾನ್ಯ ಯೋಗ ಶಿಷ್ಟಾಚಾರ ಅಭ್ಯಾಸ ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಬಂದ ಸುಮಾರು ಇನ್ನೂರಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.

ಇದನ್ನೂ ಓದಿ | Yoga Day 2022 | ಯೋಗ ದಿನ ಯಶಸ್ವಿಗೊಳಿಸಿ ದೆಹಲಿಗೆ ತೆರಳಿದ ಮೋದಿ

Exit mobile version