Site icon Vistara News

Yoga Day 2022 | ವಿಶ್ವಪಾರಂಪರಿಕ ತಾಣ ಪಟ್ಟದಕಲ್ಲಿನಲ್ಲಿ ಯೋಗ ದಿನಾಚರಣೆ

Yoga Day 2022

ಬಾಗಲಕೋಟೆ : ವಿಶ್ವಪಾರಂಪರಿಕ ತಾಣ ಪಟ್ಟದಕಲ್ಲಿನಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (Yoga Day 2022) ಆಚರಿಸಲಾಯಿತು. ಯೋಗ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ಸಾವಿರಾರು ಯೋಗಪಟುಗಳೊಂದಿಗೆ ಇವರು ಯೋಗಾಭ್ಯಾಸ ನಡೆಸಿದರು.

ಸಚಿವ ರಾಜೀವ ಚಂದ್ರಶೇಖರ್‌ ಮಾತನಾಡಿ, ಭಾರತೀಯ ಯೋಗವನ್ನು ಪ್ರಧಾನಿ ಮೋದಿ ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ. ಯೋಗ ನಮ್ಮ ದೇಶದ ಸಂಸ್ಕೃತಿ ಆಗಿದೆ. 2021 ರಲ್ಲಿ 15 ಕೋಟಿ ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಯೋಗ ಕೇವಲ ಒಂದು ದಿನಕ್ಕೆ ಸೀಮಿತ ಆಗಬಾರದು. ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಬೇಕು. ಪ್ರಧಾನಿ ಮೋದಿ ಈ ಭಾರಿ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡು ನಮ್ಮ ಕರ್ನಾಟಕದ ಮೈಸೂರಲ್ಲಿ ಈ ಬಾರಿ ಯೋಗಾಭ್ಯಾಸ ಮಾಡಿದ್ದು ನಮಗೆಲ್ಲ ಹೆಮ್ಮೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ | Yoga Day 2022 | ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಇಲ್ಲಿದೆ ಸಂಭ್ರಮದ ಝಲಕ್‌

ಮೈಸೂರಿನಲ್ಲಿ ನಡೆದ ಮೋದಿ ಕಾರ್ಯಕ್ರಮವನ್ನು ನೇರ ವೀಕ್ಷಣೆಗೆ ಎಲ್‌ಸಿಡಿ ಪರದೆ ಅಳವಡಿಸಲಾಗಿತ್ತು. ಬಳಿಕ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೧೫೦೦ ಕ್ಕೂ ಹೆಚ್ಚು ಜನ ಸಾಮೂಹಿಕ ಯೋಗದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | Yoga Day 2022 | ಯೋಗ ದಿನ ಯಶಸ್ವಿಗೊಳಿಸಿ ದೆಹಲಿಗೆ ತೆರಳಿದ ಮೋದಿ

Exit mobile version