Site icon Vistara News

Ayodhya Ram Mandir: ರಾಮಮಂದಿರ ನಿರ್ಮಾಣಕ್ಕೆ ತೆರಳಿದ ಗದಗದ ಯುವ ಶಿಲ್ಪಿ

Nagamurthy Swamy

ಗದಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿಲ್ಪಿಗಳು ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಯುವ ಶಿಲ್ಪಿಯೊಬ್ಬರು ತೆರಳಿದ್ದಾರೆ. ಈಗಾಗಲೇ ದೇಶದೆಲ್ಲೆಡೆಯಿಂದ ಹೋಗಿರುವ ಹಿರಿಯ ಶಿಲ್ಪಿಗಳು ಮಂದಿರ (Ayodhya Ram Mandir) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಜಿಲ್ಲೆಯಿಂದ ತೆರಳಿದ ಯುವ ಶಿಲ್ಪಿಯನ್ನು ಮುಂಡರಗಿ ಪಟ್ಟಣದ ಹಿರಿಯ ಶಿಕ್ಷಕ ಬಳಗ ಹಾಗೂ ಸ್ಥಳೀಯರು ಗೌರವಿಸಿ ಬೀಳ್ಕೊಟ್ಟಿದ್ದಾರೆ.

ಹೌದು,‌ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಜಗತ್ ಸೃಷ್ಟಿ ಶಿಲ್ಪಕಲಾ ಕೇಂದ್ರ ತೆರೆದು ಶಿಲ್ಪಿ ಕೆಲಸ ಮಾಡುತ್ತಿರುವ ನಾಗಮೂರ್ತಿಸ್ವಾಮಿ ಪಂಚಾನನ ಗುರು ಅವರು ರಾಮಮಂದಿರ ನಿರ್ಮಾಣದಲ್ಲಿ ತಮ್ಮ ಸೇವೆ ಸಲ್ಲಿಸಲು ತೆರಳಿದ್ದಾರೆ.

ಹಿರಿಯ‌‌ ಶಿಲ್ಪಿಯೊಬ್ಬರ ಸಹಾಯ, ಸಂಪರ್ಕದಿಂದ ಯುವಶಿಲ್ಪಿ ನಾಗಮೂರ್ತಿ ಅವರೂ ರಾಮಮಂದಿರ ನಿರ್ಮಾಣದಲ್ಲಿ ಸೇವೆ ಸಲ್ಲಿಸಲು ಅಣಿಯಾಗಿದ್ದು, ಅಯೋಧ್ಯೆಗೆ ತೆರಳುವುದಕ್ಕೂ ಮುನ್ನ, ಮುಂಡರಗಿ ಪಟ್ಟಣದ ಹಿರಿಯ ಶಿಕ್ಷಕರ ಬಳಗ ಹಾಗೂ ಸ್ಥಳಿಯರು ಕೂಡಿಕೊಂಡು ಅವರನ್ನು ಗೌರವಿಸಿ ಬೀಳ್ಕೊಟ್ಟಿದ್ದಾರೆ.

ಇದನ್ನೂ ಓದಿ | Ram Mandir: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಹೇಗಿದೆ? ಇಲ್ಲಿವೆ ನೂತನ ಫೋಟೊಗಳು

ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ

ನವದೆಹಲಿ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir) ಉದ್ಘಾಟನೆಯು 2024ರ ಜನವರಿ 22ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಆಹ್ವಾನ ನೀಡಲಾಗಿದೆ.

ಜನವರಿ 22ರಂದು ಗರ್ಭಗೃಹದಲ್ಲಿ ರಾಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂಬ ಸುದ್ದಿಯನ್ನು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಖಚಿತಪಡಿಸಿದ್ದಾರೆ. ಈ ಉದ್ಘಾಟನೆಯ ಸಮಾರಂಭಕ್ಕೆ ಹಾಜರಾಗುವಂತೆ ನೀಡಲಾಗಿರುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದರು.

ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಇನ್ನು ವಿಜಯ ದಶಮಿಯ ದಿನದಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ ವರ್ಷದಿಂದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲೇ ವಿಜಯ ದಶಮಿ ಆಚರಿಸಲಾಗುವುದು ಎಂದು ಪ್ರಕಟಿಸಿದ್ದರು.

ಇದನ್ನೂ ಓದಿ | Ayodhya Ram Mandir : ಡೆಲ್ಲಿಯಿಂದ ಅಯೋಧ್ಯೆಗೆ 635 ಕಿ. ಮೀ ಎತ್ತಿನಗಾಡಿಯಲ್ಲಿ ಸಾಗಲಿದೆ ಇಸ್ಕಾನ್​​ ರಥ

ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಹೀಗಾಗಿ ಇತ್ತೀಚೆಗೆ ರಾಮ ಮಂದಿರ ಗರ್ಭಗಡಿ (Sanctum Sanctorum) ಹಾಗೂ ದೇವಾಲಯ ಒಳಗಿರುವ ಅದ್ಭುತ, ಮನಮೋಹಕ ಕಲಾಕೃತಿಗಳ (carvings) ಫೋಟೋಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version