Site icon Vistara News

Love Jihad: ಲವ್ ಜಿಹಾದ್‌ ಬಲೆಗೆ ಬೀಳಲ್ಲ; ಗದಗದಲ್ಲಿ ಯುವತಿಯರಿಂದ ಆಣೆ ಪ್ರಮಾಣ

Love Jihad

ಗದಗ: ಲವ್ ಜಿಹಾದ್ ಆತಂಕ ಹಿನ್ನೆಲೆಯಲ್ಲಿ ಸುಮಾರು 200 ಯುವತಿಯರಿಗೆ ಆಣೆ ಪ್ರಮಾಣ ಮಾಡಿಸಿ, ಲವ್ ಜಿಹಾದ್‌ಗೆ (Love Jihad) ಬಲಿಯಾಗದಂತೆ ಜಾಗೃತಿ ಮೂಡಿಸಿರುವುದು ನಗರದಲ್ಲಿ ಭಾನುವಾರ ಕಂಡುಬಂತು. ಅನ್ಯ ಧರ್ಮೀಯ ಯುವಕರ ಲವ್ ಜಿಹಾದ್‌ಗೆ ಬಲಿಯಾಗದಂತೆ ಜಾಗೃತಿ ಸಭೆಯಲ್ಲಿ ಅರಿವು ಮೂಡಿಸಲಾಯಿತು.

ನಗರದ ವಿಠ್ಠಲಾರೂಢ ಸಭಾಭವನದಲ್ಲಿ ನಡೆದ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮಾಜದ ಯುವತಿಯರಿಗೆ ಪೋಷಕರಿಂದ ಆಣೆ ಪ್ರಮಾಣ ಮಾಡಿಸಲಾಯಿತು. ದೇವರ ಮೇಲೆ ಆಣೆ ಪ್ರಮಾಣ ಮಾಡಿಸಿದ ಪೋಷಕರು, ಲವ್‌ ಜಿಹಾದ್‌ ಬಲೆಗೆ ಬೀಳದಂತೆ ಅರಿವು ಮೂಡಿಸಿದರು.

ಇದನ್ನೂ ಓದಿ | BJP JDS Alliance : ಕಾಂಗ್ರೆಸ್‌ನಲ್ಲಿ ಏಕೈಕ ಸಂಸದನೂ ಇರಬಾರದು: ಡಿ.ಕೆ. ಬ್ರದರ್ಸ್ಸ್‌ಗೆ ಬಿ.ವೈ. ವಿಜಯೇಂದ್ರ ಟಾಂಗ್‌

ರಾಜ್ಯ ಸೇರಿ ದೇಶದೆಲ್ಲೆಡೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಹಿಂದು ಯುವತಿಯರನ್ನು ರಕ್ಷಿಸಬೇಕು ಎಂದು ಹಿಂದುಪರ ಸಂಘಟನೆಗಳು ಜಾಗೃತಿ ಮೂಡಿಸುತ್ತಿವೆ. ಮಂಗಳೂರಿನಲ್ಲಿ ಇತ್ತೀಚೆಗೆ ಲವ್ ಜಿಹಾದ್ ತಡೆಗೆ ವಿಶ್ವ ಹಿಂದು ಪರಿಷತ್‌ ಹೆಲ್ಪ್‌ಲೈನ್‌ ಕೂಡ ಆರಂಭ ಮಾಡಿತ್ತು. ಇದೀಗ ಗದಗದಲ್ಲಿ ಯುವತಿಯರಿಗೆ ಆಣೆ ಪ್ರಮಾಣ ಮಾಡಿಸಿ ಲವ್‌ ಜಿಹಾದ್‌ ಬಗ್ಗೆ ಪೋಷಕರೇ ಜಾಗೃತಿ ಮೂಡಿಸಿದ್ದಾರೆ.

9 ತಿಂಗಳ ಹಸುಗೂಸನ್ನೇ ಕೊಂದ ಅಜ್ಜಿ; ಅತ್ತೆ ವಿರುದ್ಧ ಸೊಸೆ ದೂರು!

ಗದಗ: ತವರು ಮನೆಯಿಂದ ಬಾಣಂತನ ಮುಗಿಸಿ ಗಂಡನ ಮನೆಗೆ ಬಂದಿದ್ದ ಆಕೆಗೆ ಕೆಲವೇ ದಿನಗಳಲ್ಲಿ ಅಘಾತವೊಂದು ಕಾದಿತ್ತು. ಚೆನ್ನಾಗಿದ್ದ 9 ತಿಂಗಳ ಹಸುಗೂಸು ಏಕಾಏಕಿ ಮೃತಪಟ್ಟಿತ್ತು. ಕಾರಣ ಮಾತ್ರ ನಿಗೂಢವಾಗಿತ್ತು. ಆದರೆ ಇದೀಗ ಮಗುವನ್ನು ನನ್ನ ಅತ್ತೆಯೇ ಕೊಂದಿದ್ದಾರೆ (Murder Case) ಎಂದು ಸೊಸೆ ದೂರು ನೀಡಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಮಗುವಿನ ಅಜ್ಜಿಯಿಂದಲೇ ಕೊಲೆ ನಡೆದಿದೆ ಎಂದು ದೂರು ದಾಖಲಾಗಿದೆ. ನವೆಂಬರ್ 22 ರಂದು ಈ ಕೃತ್ಯ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.

ನಾಗರತ್ನ ಎಂಬುವವರ 9 ತಿಂಗಳ ಮಗುವು ನಿಗೂಢವಾಗಿ ಮೃತಪಟ್ಟಿತ್ತು. ಕುಟುಂಬಸ್ಥರೆಲ್ಲರೂ ಸೇರಿ ಜಮೀನಿನಲ್ಲಿ ಮಗುವಿನ ಅಂತ್ಯಸಂಸ್ಕಾರವನ್ನು ನಡೆಸಿದ್ದರು. ಇದೀಗ ಅತ್ತೆ ಸರೋಜಾ ವಿರುದ್ಧ ಸೊಸೆ ನಾಗರತ್ನ ದೂರು ನೀಡಿದ್ದಾರೆ.

ಹೆರಿಗೆ ಆದ ಐದು ತಿಂಗಳ ಬಳಿಕ ಗಂಡನ ಮನೆಗೆ ತಾಯಿ, ಮಗು ಬಂದಾಗ, ಅತ್ತೆ ಸರೋಜಾ ಇಷ್ಟು ಬೇಗ ಮಗು ಬೇಕಿತ್ತಾ ಎಂದು ಸಿಟ್ಟಿನಿಂದ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಮಗುವಿಗೆ ಅಡಿಕೆ ಹೋಳು, ಎಲೆ ತುಂಬ ತಿನ್ನಿಸಿ ಉಸಿರುಗಟ್ಟಿಸಿ‌ ಕೊಂದಿರುವುದಾಗಿ ದೂರಿನಲ್ಲಿ ಉಲ್ಲೇಖಸಿದ್ದಾರೆ.

ಇದನ್ನೂ ಓದಿ | Self Harming: ರನ್ನಿಂಗ್ ರೇಸ್​ನಲ್ಲಿ ಸೋಲು; ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಸೂಸೈಡ್‌!

ದೂರು ದಾಖಲಾಗುತ್ತಿದ್ದಂತೆ ಗದಗ ಎಸಿ ವೆಂಕಟೇಶ‌ ನಾಯಕ್, ಸಿಪಿಐ ಎಸ್‌.ಎಸ್ ಬೀಳಗಿ ನೇತೃತ್ವದಲ್ಲಿ‌ ಮಗುವಿನ ಶವ ತೆಗೆಯಲಾಗಿದೆ. ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಜೇಂದ್ರಗಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮಗು ಮೃತಪಟ್ಟಿದ್ದು ಹೇಗೆ ಎಂಬುದು ತಿಳಿಯಲಿದೆ.

‌ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version