ಶಿವಮೊಗ್ಗ: ಅರಿಶಿನಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಭದ್ರಾವತಿ ಮೂಲದ ಶರತ್ ಎಂಬಾತ ಮೃತಪಟ್ಟಿದ್ದ. ಈ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಗಾಜನೂರು ಡ್ಯಾಂ (Gajanur Dam) ಪ್ರವೇಶಕ್ಕೆ ನಿಷೇಧ ಇದ್ದರೂ ಸಿಬ್ಬಂದಿ ಕಣ್ಣುತಪ್ಪಿಸಿ ಹೋದ ಯುವಕನೊಬ್ಬ (youth drowned) ನೀರುಪಾಲಾಗಿದ್ದಾನೆ. ಮಿಡ್ಲಘಟ್ಟದ ಹರೀಶ್ (22) ನೀರುಪಾಲಾದ ಯುವಕ.
ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯದಲ್ಲಿ ಈ ದುರ್ಘಟನೆ ನಡೆದಿದೆ. ನಿನ್ನೆ ಶುಕ್ರವಾರ ಹರೀಶ್ ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಬಂದಿದ್ದ. ಡ್ಯಾಂ ಪ್ರವೇಶಕ್ಕೆ ನಿಷೇಧ ಇದ್ದ ಕಾರಣಕ್ಕೆ ಚಾನಲ್ ಪಕ್ಕದ ದಾರಿಯಲ್ಲಿ ಹೋಗಿದ್ದರು. ಅಲ್ಲಿನ ಕಾಮಗಾರಿ ಸೇತುವೆಗೆ ಹೋಗಿದ್ದಾಗ ಹರೀಶ್ ನೀರುಪಾಲಾಗಿದ್ದಾನೆ.
ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಹರೀಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೋಟ್ ಮೂಲಕ ಸ್ಥಳೀಯ ಮೀನುಗಾರರು, ಈಜುಗಾರರು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ