ಬೆಂಗಳೂರು: ಸಂಗಮ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಟರ್ಬೋಸ್ಟೀಲ್ ಮತ್ತು ವಿಸ್ತಾರ ನ್ಯೂಸ್ ಸಹಯೋಗದಲ್ಲಿ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇದೇ ಜು. 12ರಿಂದ 14 ರವರೆಗೆ ಮೂರು ದಿನಗಳ ಕಾಲ “ಯುವ ಸಂಭ್ರಮ 2024” ಕಾರ್ಯಕ್ರಮ (Yuva Sambhrama 2024) ಏರ್ಪಡಿಸಲಾಗಿದೆ.
ಇದನ್ನೂ ಓದಿ: How Does Plastic Affect Cancer: ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಬರದಂತೆ ತಡೆಯುವುದು ಹೇಗೆ?
ಜು.12 ರಂದು ಬೆಳಗ್ಗೆ 10 ಗಂಟೆಗೆ ಚಿಣ್ಣರ ಮೇಳ ಏರ್ಪಡಿಸಲಾಗಿದ್ದು, ಗಾಯನ, ರಸಪ್ರಶ್ನೆ, ಚಿತ್ರಕಲೆ ಹಾಗೂ ಆಶುಭಾಷಣ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ನೃತ್ಯ ಸಂಭ್ರಮ ನಡೆಯಲಿದ್ದು, ಭಾರತೀಯ ಸಂಸ್ಕೃತಿಯ ವಿದ್ಯಾಪೀಠ ಶಾಲೆ, ಸುಮನ್ಸ್ ಕಾನ್ವೆಂಟ್, ಎಂ.ಇ.ಎಸ್. ಶಾಲೆ ಮತ್ತು ಕಾಲೇಜು ಹಾಗೂ ಲಹರಿ ಮ್ಯೂಜಿಕಲ್ ಅಕಾಡಮಿ ವಿದ್ಯಾರ್ಥಿಗಳು, ನರ್ತನ ನೃತ್ಯ ವೃಂದ ಹಾಗೂ ಪಾರ್ವತಿ ನೃತ್ಯ ವಿಹಂಗಮ ತಂಡದಿಂದ ನೃತ್ಯ ಸಂಭ್ರಮ ಜರುಗಲಿದೆ.
ಇದನ್ನೂ ಓದಿ: Heart Health: ಹೃದಯದ ಆರೋಗ್ಯಕ್ಕಾಗಿ ಈ ಐದು ಅಡುಗೆ ಎಣ್ಣೆ ಸೂಕ್ತ; ಮಾಧುರಿ ದೀಕ್ಷಿತ್ ಪತಿಯ ಸಲಹೆ ಇದು
ಜು. 12 ರಿಂದ 14 ರವರೆಗೆ ಆರೋಗ್ಯ ಮೇಳ (ಉಚಿತ ಆರೋಗ್ಯ ತಪಾಸಣೆ) ಏರ್ಪಡಿಸಲಾಗಿದೆ. ಜು.13 ಮತ್ತು 14 ರಂದು ಬೆಳಿಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 40ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ.
ಜು.13 ಮತ್ತು 14 ರಂದು ಎರಡು ದಿನಗಳ ಕಾಲ ಸಂಜೆ 6 ಗಂಟೆಗೆ ಪ್ರಸಿದ್ಧ ಕಲಾವಿದರಿಂದ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸರ್ವರಿಗೂ ಉಚಿತ ಪ್ರವೇಶ ವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.