ಕಾರವಾರ: ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ (Yuva Samsat Utsava) ಕರ್ನಾಟಕದ ಪ್ರತಿನಿಧಿಯಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಿದ್ಯಾರ್ಥಿನಿ ಚೇತನಾ ಕೊಲ್ವೇಕರ್ ತನ್ನ ಮಾತೃಭಾಷೆ ಕೊಂಕಣಿಯಲ್ಲಿಯೇ ಕೆಚ್ಚೆದೆಯ ಭಾಷಣ ಮಾಡಿದ್ದಾಳೆ.
ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಆಯೋಜನೆಯ ನಾಲ್ಕನೇ ಆವೃತ್ತಿಯ ರಾಷ್ಟ್ರೀಯ ಯುವ ಸಂಸತ್ ಉತ್ಸವ ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿದ್ದು, ಪ್ರತಿ ರಾಜ್ಯಗಳಿಂದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕರ್ನಾಟಕದಿಂದಲೂ ಮೂವರು ಭಾಗವಹಿಸಿದ್ದು, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕಾರವಾರದ ಚೇತನಾ ಕೊಲ್ವೇಕರ್ ಭಾಷಣ ಮಾಡಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ 3000 ದೇಗುಲ ನಿರ್ಮಾಣ ಮಾಡಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೂಚನೆ; ಕಾಮಗಾರಿ ಪ್ರಾರಂಭ
ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಲಾ ವಿಭಾಗದಲ್ಲಿ ಚೇತನಾ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ. ಈ ಹಿಂದೆ ಕೂಡ ಯುವ ಸಂಸತ್ ಉತ್ಸವದಲ್ಲಿ ಸಭಿಕಳಾಗಿ ಸಂಸತ್ ಭವನದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಳು. ಈ ಬಾರಿ ತಾನೇ ಭಾಷಣ ಮಾಡಲು ಅವಕಾಶ ಪಡೆಯುವ ಮೂಲಕ ಯುವ ಜನತೆಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಿದ್ದಾಳೆ. ಈ ಯುವ ಸಂಸತ್ ಉತ್ಸವದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಮಾತ್ರ ಮಾತನಾಡಲು ಅವಕಾಶ ಇರುತ್ತದೆ. ಆದರೆ ಚೇತನಾ ಮಾತೃ ಭಾಷೆ ಕೊಂಕಣಿಯಲ್ಲೇ ಭಾಷಣ ಪ್ರಾರಂಭಿಸಿ ಮೆಚ್ಚುಗೆ ಗಳಿಸಿದ್ದಾಳೆ.
“ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಯಾಗಿರುವ ಕಾರವಾರದ ಹುಡುಗಿಯಿಂದ ಎಲ್ಲರಿಗೂ ಬೆಳಗಿನ ವಂದನೆಗಳು” ಎಂದು ಕೊಂಕಣಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸರ್ಕಾರದಲ್ಲಿ ಯುವ ಜನತೆಯ ಪಾತ್ರದ ಕುರಿತು ಭಾಷಣ ಪ್ರಾರಂಭಿಸಿದ್ದಾಳೆ. “ಯುವ ಜನತೆಯೇ ದೇಶದ ಭವಿಷ್ಯ., ಮುಂದಿನ ಪೀಳಿಗೆಯ ಅಂತಿಮ ಭರವಸೆ. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬಂತೆ ಯುವಕರಿಲ್ಲದೇ ದೇಶವಿಲ್ಲ” ಎಂದು ಚೇತನಾ ಹೇಳಿದ್ದಾಳೆ.
ಇದನ್ನೂ ಓದಿ: 2021-22ರ ಸಾಲಿನಲ್ಲಿ ಬಿಜೆಪಿ 1917.12 ಕೋಟಿ ರೂ. ಆದಾಯ! ಕಾಂಗ್ರೆಸ್‌ಗೆ ಎಷ್ಟು?