ದಾವಣಗೆರೆ: ದಾವಣಗೆರೆಯಲ್ಲಿ ಜೊಮ್ಯಾಟೋ ಕಂಪನಿ ವಿರುದ್ಧ ಜೊಮ್ಯಾಟೋ ಡೆಲಿವರಿ ಬಾಯ್ಸ್ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಜೊಮ್ಯಾಟೊ ಸಂಸ್ಥೆ, ಗಿಕ್ಸ್ ಎಂಬ ಹೊಸ ರೇಟಿಂಗ್ ಪದ್ಧತಿಯನ್ನು ಪರಿಚಯಿಸಿದೆ. ಇದರಿಂದ ಡೆಲಿವರಿ ಬಾಯ್ಸ್ ಆದಾಯದ ಮೇಲೆ ಪರಿಣಾಮ ಬೀರಿದೆ. ಈ ನೀತಿಯು ತಮಗೆ ವಿರುದ್ಧವಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.
ಡೆಲಿವರಿ ಬಾಯ್ಸ್ ಬೇಡಿಕೆಗಳು:
- ಗಿಕ್ಸ್ ಪದ್ಧತಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯ
- ಹಳೆಯ ರೇಟ್ ಕಾರ್ಡ್ ಮಾದರಿಯಲ್ಲಿ ವೇತನ ನೀಡಬೇಕು
- ರೆಗ್ಯುಲರ್ ಸಿಬ್ಬಂದಿ ಇಎಸ್‌ಐ ಹಾಗೂ ಪಿ.ಎಫ್. ನೀಡುವಂತೆ ಬೇಡಿಕೆ
ಈ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿದ ಸಿಬ್ಬಂದಿ ಎರಡು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದ್ದಾರೆ.
ಹೆಚ್ಚಿನ ಓದಿಗಾಗಿ: ಬೊಮ್ಮಯಿ ಸಿಎಂ ಆಗಿದ್ದಾರೆ ಎಂದರೆ ನಾನು ಆಗೋದ್ರಲ್ಲಿ ತಪ್ಪೇನಿದೆ?’; ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿಕೆ